Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ : ಅರುಣ್ ಮಾಚಯ್ಯ*
  • *ಪೊನ್ನಂಪೇಟೆ ಮತ್ತು ಶ್ರೀಮಂಗಲ : ಮಾ.26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮಾ.27 ರಂದು ಕೂಡಿಗೆಯಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ, ವೃತ್ತಿ ಮಾರ್ಗದರ್ಶನ*
  • *ಏ.7 ರಿಂದ 30 ರವರೆಗೆ ಬೇಸಿಗೆ ತರಬೇತಿ ಶಿಬಿರ*
  • *ಮಡಿಕೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ :  ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ : ಟಿ.ಕೆ.ಪಾಂಡುರಂಗ*
  • *ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4 : ಮೀಡಿಯಾ ಚಾಲೆಂಜರ್ಸ್ ತಂಡ ಚಾಂಪಿಯನ್*
  • *ಕೆ.ಜಿ.ಬೋಪಯ್ಯರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ : ಕಾಂಗ್ರೆಸ್ಸಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ : ಪರಮೇಶ್ವರ್ ಅಸಮಾಧಾನ*
  • *ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ*
  • *ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ರತನ್ ತಮ್ಮಯ್ಯ ಆಯ್ಕೆ*
  • *ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ನಿಂದ ಪ್ರತಿಭಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೆರೆಗಳನ್ನು ಉಳಿಸಿ, ಹುಲಿ-ಕಾಡಾನೆಗಳ ಸಮಸ್ಯೆ ನೀಗಿಸಿ : ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ನಿವಾಸಿಗಳ ಅಳಲು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೆರೆಗಳನ್ನು ಉಳಿಸಿ, ಹುಲಿ-ಕಾಡಾನೆಗಳ ಸಮಸ್ಯೆ ನೀಗಿಸಿ : ನಂಜರಾಯಪಟ್ಟಣ ಗ್ರಾಮಸಭೆಯಲ್ಲಿ ನಿವಾಸಿಗಳ ಅಳಲು*

ಜೂನ್ 24, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.24 NEWS DESK : ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ದರಾದ ಚೆಟ್ಟಡ್ಕ ಎಲ್. ವಿಶ್ವ ಅವರ ಅಧ್ಯಕ್ಷತೆಯಲ್ಲಿ ಹೊಸಪಟ್ಟಣದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯಲ್ಲಿನ ವಿಚಾರಗಳು ಹಾಗೂ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಹೊಸಪಟ್ಟಣ, ವಿರೂಪಾಕ್ಷ ಪುರ ವ್ಯಾಪ್ತಿಯಲ್ಲಿ ಹುಲಿಗಳೆರಡು ಕಾಣಿಸಿಕೊಂಡು ಕಾಡಂಚಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳು ನಿಗಾವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಜೀವಹಾನಿ ಆಗದಂತೆ ತುರ್ತು ಕ್ರಮ ವಹಿಸುವಂತೆ ಗ್ರಾ.ಪಂ ಸದಸ್ಯ ಆರ್.ಕೆ.ಚಂದ್ರು ಒತ್ತಾಯಿಸಿದರು. ದಾಸವಾಳ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಅಳವಡಿಸಿರುವ ರೈಲ್ವೆ ಬ್ಯಾರಿಕೇಡ್ ಹಾಳಾಗಿದ್ದು, ಸರಿಪಡಿಸಬೇಕೆಂದು ಗ್ರಾಮಸ್ಥರಾದ ಸಚಿನ್ ಆಗ್ರಹಿಸಿದರು. ಮೀನುಕೊಲ್ಲಿ, ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಮರಗಳ ಹನನವಾಗುತ್ತಿದೆ. ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಮಾವಾಜಿ ರವಿ ನೇರವಾಗಿ ಆರೋಪಿಸಿದರು. ಈ ಬಗ್ಗೆ ಜಂಟಿ ಕಾರ್ಯಾಚರಣೆ ಮಾಡಿ ಮರಗಳ್ಳರನ್ನು ಸದೆಬಡಿಯಬೇಕೆಂದು ಒತ್ತಾಯಿಸಿದರು. ಈ ಆರೋಪಕ್ಕೆ ಸದಸ್ಯ ಆರ್.ಕೆ.ಚಂದ್ರು ಧ್ವನಿಗೂಡಿಸಿದರು. ಹೊಸಪಟ್ಟಣ ಗ್ರಾಮದಲ್ಲಿ ಎರಡು ಕೆರೆಗಳಿದ್ದು, 2.40 ಎಕರೆ ಜಾಗದಲ್ಲಿದ್ದ ಕೆರೆಯನ್ನು ಕಂದಾಯ ಇಲಾಖೆ ಖಾಸಗಿ ವ್ಯಕ್ತಿಗೆ ಮಂಜೂರಾತಿ ಮಾಡಲಾಗಿದೆ. ಈಗ ಉಳಿದ 30 ಸೆಂಟು ಜಾಗದಲ್ಲಿನ ಕೆರೆಯನ್ನು ಸಂರಕ್ಷಣೆ ಮಾಡಬೇಕು. ಸಾರ್ವಜನಿಕರ ಉಪಯೋಗಕ್ಕೆ ಕೆರೆಗೆ ಸೂಕ್ತ ರಸ್ತೆ ಒಸಗಿಸಬೇಕೆಂದು ಹೊಸಪಟ್ಟಣ ಗ್ರಾಮದ ನಿವಾಸಿ ಹೆಚ್.ಎಂ.ಸ್ವಾಮಿ ಒತ್ತಾಯಿಸಿದರು. ಮೂಲ ಸ್ಥಾನ ಬಿಟ್ಟು ಬದಲೀ ಪ್ರದೇಶಕ್ಕೆ ನಮ್ಮ ಜಾಗದ ದಾಖಲೆಗಳು ಬದಲಾಗಿದ್ದು ಇದರಿಂದ ಸಮಸ್ಯೆಗಳು ಉದ್ಭವವಾಗಿವೆ.
ಮೊದಲಿಂದಲೂ ನಂಜರಾಯಪಟ್ಟಣ ಗ್ರಾಪಂ ಗೆ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ನಮ್ಮ  ಜಾಗ ರಸೂಲ್ ಪುರದಲ್ಲಿದ್ದು ಇದನ್ನು ಗುಡ್ಡೆಹೊಸೂರು ಗ್ರಾಪಂ ಗೆ ಸೇರಿಸಲಾಗಿದೆ. ಆದ್ದರಿಂದ ನಮ್ಮನ್ನು ನಂಜರಾಯಪಟ್ಟಣ ಗ್ರಾಪಂ ಗೆ ವರ್ಗಾಯಿಸಿ ನಮಗೆ ನ್ಯಾಯ ಒದಗಿಸಿ ಎಂದು ಕಬ್ಬಿನಗದ್ದೆ ನಿವಾಸಿ ಮಣಿಕಂಠ, ವರುಣ್, ರಾಜಾ, ಲೋಕೇಶ್ ಮೊದಲಾದವರು ಸಭೆಯಲ್ಲಿ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಸಭಾಧ್ಯಕ್ಷ ವಿಶ್ವ, ರಸೂಲ್ ಪುರದ ಏಳು ಕುಟುಂಬಗಳ ಸಮಸ್ಯೆಗಳನ್ನು ತಹಸೀಲ್ದಾರ್ ಗಮನಕ್ಕೆ ತಂದು ಪ್ರತ್ಯೇಕ ಸಭೆ ಮಾಡಿ ಶೀಘ್ರದಲ್ಲಿಯೇ ಪರಿಹಾರ ಕಾಣಲಾಗುವುದು ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ಪಿ.ಎಸ್.ಕುಸುಮಾ, ಸದಸ್ಯರಾದ ಅಯ್ಯಂಡ್ರಲೋಕನಾಥ್, ಆರ್.ಕೆ.ಚಂದ್ರು, ಜೆ.ಟಿ.ಜಾಜಿ, ಎಸ್.ಎಂ.ಸಮೀರ, ಮಾವಾಜಿ ರಕ್ಷಿತ, ಗಿರಿಜಮ್ಮ ಇದ್ದರು. ಇದೇ ಸಂದರ್ಭ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಾದ ಭಾಗೀರಥಿ, ಲಲಿತಾ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ನೋಡಲ್ ಅಧಿಕಾರಿಯಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸ್ವಾಮಿ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎಸ್.ರಾಜಶೇಖರ್ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ರಾಣಿ ಪ್ರಾರ್ಥಿಸಿದರು. ಕಾರ್ಯದರ್ಶಿ ಎಂ.ಆರ್.ಶೇಷಗಿರಿ, ಗ್ರಾಮ ಲೆಕ್ಕಿಗರಾದ ಸೋನು, ಸಚಿನ್, ಚೆಸ್ಕಾಂ ಅಭಿಯಂತರ ಸೋಮೇಶ್, ನರೇಗಾ ಅಭಿಯಂತರ ವಿಷ್ಣು, ಗ್ರಾಮೀಣಾಭಿವೃದ್ದಿ ಇಲಾಖೆ ಅಭಿಯಂತರ ಚಿದಾನಂದ, ಅರಣ್ಯ ಇಲಾಖೆ ಮೀನುಕೊಲ್ಲಿ ವಿಭಾಗದ ಸಚಿನ್ ನಿಂಬಾಳ್ಕರ್, ಆನೆಕಾಡು ವಿಭಾಗದ ದೇವಯ್ಯ, ಆಹಾರ ಇಲಾಖೆಯ ಅಧಿಕಾರಿ ಸ್ವಾತಿ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ : ಅರುಣ್ ಮಾಚಯ್ಯ*

ಮಾರ್ಚ್ 23, 2026

*ಪೊನ್ನಂಪೇಟೆ ಮತ್ತು ಶ್ರೀಮಂಗಲ : ಮಾ.26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮಾರ್ಚ್ 23, 2026

*ಮಾ.27 ರಂದು ಕೂಡಿಗೆಯಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ, ವೃತ್ತಿ ಮಾರ್ಗದರ್ಶನ*

ಮಾರ್ಚ್ 23, 2026

*ಪೊನ್ನಂಪೇಟೆ ಮತ್ತು ಶ್ರೀಮಂಗಲ : ಮಾ.26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮಾರ್ಚ್ 23, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.23 NEWS DESK : 66/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರ ಪೊನ್ನಂಪೇಟೆ ಮತ್ತು ಶ್ರೀಮಂಗಲದಲ್ಲಿ ಮಾಸಿಕ ನಿರ್ವಹಣೆ…

*ಮಾ.27 ರಂದು ಕೂಡಿಗೆಯಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ, ವೃತ್ತಿ ಮಾರ್ಗದರ್ಶನ*

ಮಾರ್ಚ್ 23, 2026

*ಏ.7 ರಿಂದ 30 ರವರೆಗೆ ಬೇಸಿಗೆ ತರಬೇತಿ ಶಿಬಿರ*

ಮಾರ್ಚ್ 23, 2026

*ಮಡಿಕೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ :  ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ : ಟಿ.ಕೆ.ಪಾಂಡುರಂಗ*

ಮಾರ್ಚ್ 23, 2026

*ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4 : ಮೀಡಿಯಾ ಚಾಲೆಂಜರ್ಸ್ ತಂಡ ಚಾಂಪಿಯನ್*

ಮಾರ್ಚ್ 23, 2026

*ಕೆ.ಜಿ.ಬೋಪಯ್ಯರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ : ಕಾಂಗ್ರೆಸ್ಸಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ : ಪರಮೇಶ್ವರ್ ಅಸಮಾಧಾನ*

ಮಾರ್ಚ್ 23, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ*

ಮಾರ್ಚ್ 23, 2026

*ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷರಾಗಿ ರತನ್ ತಮ್ಮಯ್ಯ ಆಯ್ಕೆ*

ಮಾರ್ಚ್ 23, 2026

*ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ನಿಂದ ಪ್ರತಿಭಟನೆ*

ಮಾರ್ಚ್ 23, 2026

*ಶ್ರೀ ವಿನಾಯಕ ಸೇವಾ ಟ್ರಸ್ಟ್ ನಿಂದ ಶ್ರೀ ರಾಮನವಮಿ ಆಚರಣೆ : ಮಾ.26ಕ್ಕೆ ವಾರ್ಷಿಕ ಮಹಾಸಭೆ*

ಮಾರ್ಚ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.