
ಮಡಿಕೇರಿ ಜೂ.27 NEWS DESK : ಕುಶಾಲನಗರ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ದಡ ವ್ಯಾಪ್ತಿಯ ಹೊಳೆಕೆರೆ ಪೈಸಾರಿಯ ಪ್ರವಾಹದ ಅಪಾಯದ ಭೀತಿಯಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಗ್ರಾಮದ ನಿವಾಸಿಯಾದ ಬೇಬಿ ಕೋಂ ಸಿದ್ದ ಹಾಗೂ ಅಕ್ಕಣ್ಣಿ ಕೋಂ ಕರ್ಪ ಅವರ ಗುಡಿಸಲಿಗೆ ಕಾವೇರಿ ನದಿ ನೀರು ಬಂದಿದ್ದು, ಕುಟುಂಬದವರು ಸಂಬಂಧಿಕರ ಮನೆಗೆ ತೆರಳಿದ್ದಾರೆ.









