
ಭಾಗಮಂಡಲ NEWS DESK ಜೂ.27 : ಯಡತೊರೆ ಶ್ರೀ ಯೋಗಾನಂದೇಶ್ವರ ಮಠದ ಶ್ರೀ ಶ್ರೀ ಶಂಕರ ಭಾರತಿ ಮಹಾಸ್ವಾಮಿಗಳು ಇಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಹಾಗೂ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದರು. ಕಾವೇರಿ ನದಿಗೆ ಪೂಜೆ ಸಲ್ಲಿಸಿ ದೇಶದಲ್ಲಿ ಶಾಂತಿ ನೆಲೆಗೊಂಡು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು. ಪ್ರಮುಖರಾದ ಈಶ್ವರ್ ಭಟ್, ರಮೇಶ್ ಹೊಳ್ಳ, ಸಂಪತ್ ಕುಮಾರ್, ಸುಬ್ರಮಣ್ಯ ಹೊಳ್ಳ, ನಾಗರಾಜ್ ಭಟ್ ಪಿ. ಎ, ಶ್ರೀಧರ್ ರೈ, ದೇವಾಲಯದ ಅರ್ಚಕರು ಮತ್ತಿತರರು ಸ್ವಾಮೀಜಿಯನ್ನು ಸ್ವಾಗತಿದರು.








