
ಮಡಿಕೇರಿ NEWS DESK ಜೂ.29 : ಮಡಿಕೇರಿ ನಗರದ 4 ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ 95ನೇ ವರ್ಷದ ದಸರಾ ಉತ್ಸವದ ನೂತನ ಸಮಿತಿಯ ಜಂಟಿ ಅಧ್ಯಕ್ಷರಾಗಿ ನಾಗರಾಜ್ ಹಾಗೂ ಕಿಶೋರ್ ಬಾಬು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎಂ.ಎಲ್, ಉಪಾಧ್ಯಕ್ಷರಾಗಿ ಚೇತನ್(ದಿನು), ರಂಜಿತ್ ಕೃಷ್ಣಮೂರ್ತಿ(ರಂಜು, ಮೈಸೂರು), ಮೋಹನ್ ಸಂಪತ್, ಅನಿಲ್ ಕೆ.ಎ, ಮಧು ಎಮ್ ಪಿ, ಬಾಲಸುಬ್ರಮಣ್ಯ ಕಾರ್ಯದರ್ಶಿಗಳಾಗಿ ಸದಾಶಿವಶೆಟ್ಟಿ, ಹರೀಶ್, ಸಹ ಕಾರ್ಯದರ್ಶಿಗಳಾಗಿ ಸಂತೋಷ್, ಪುರುಷೋತ್ತಮ್, ಖಜಾಂಚಿಯಾಗಿ ಪವನ್, ಸಹ ಖಜಾಂಚಿಯಾಗಿ ಅಭಿಜಿತ್, ಶೇಖರ್ ಬಿ.ಡಿ, ದೇವಿ ಅಲಂಕಾರ ಸಮಿತಿ ಅಧ್ಯಕ್ಷರಾಗಿ ದೇಜುಶೆಟ್ಟಿ, ದಸರಾ ಸಮಿತಿಯ ಶತಮಾನೋತ್ಸವದ ಕಾರ್ಯಾಧ್ಯಕ್ಷರಾಗಿ ರಂಜಿತ್ ಸಿ.ಎಸ್, ಅಮನ್, ಗೌರವ ಅಧ್ಯಕ್ಷರುಗಳಾಗಿ ನವೀನ್ ಅಂಬೇಕಲ್, ಬಿ.ಎಮ್.ರಮೇಶ್, ಮಹಾಪೋಷಕರಾಗಿ ರಾಜು ಎಂ.ಬಿ, ಎ.ಎ.ಗಣೇಶ್, ಉಮೇಶ್, ಜೇಮ್ಸ್, ದಯಾನಂದ್ ಶೆಟ್ಟಿ ಟಿ.ಎಸ್, ಕೆ.ವಿ.ಸುಬ್ರಮಣಿ, ಎಸ್.ಸಿ.ಹರೀಶ್ ನೇಮಕಗೊಂಡಿದ್ದಾರೆ. *ಕರಗ ಸಮಿತಿ* ರಾಕೇಶ್, ಕುಮಾರೇಶ್, ರತೀಶ್, ನಿಶ್ಚಲ್ ಸೋಮಣ್ಣ. ಕಥಾಸಾರಾಂಶ ರಂಜಿತ್ ಎಚ್.ಎಮ್, ಚಲನವಲನ ಸಮಿತಿ ದಿನೇಶ್ ನಾಯರ್ ಹಾಗೂ ತಂಡ, ಮಂಟಪ ಅಲಂಕಾರ ಸಮಿತಿ ವಿಘ್ನೇಶ್, ರಕ್ಷಿತ್, ಲಿಖಿತ್, ಚರಣ್ ಹಾಗೂ ತಂಡ ಆಯ್ಕೆಯಾಗಿದ್ದಾರೆ.








