Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*
  • *ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*
  • *ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*
  • *ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*
  • *ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*
  • *ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*
  • *ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*
  • *ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*
  • *ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*
  • *ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರ : ಮಾರುತಿ ದಾಸಣ್ಣವರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರ : ಮಾರುತಿ ದಾಸಣ್ಣವರ್*

ಜುಲೈ 2, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.2 NEWS DESK : ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೃಹತ್ ಕೊಡುಗೆಯಾದ ‘ವಚನ’ಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಫ.ಗು.ಹಳಕಟ್ಟಿ ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಉಪನ್ಯಾಸಕ ಮಾರುತಿ ದಾಸಣ್ಣವರ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿಭವನದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಪ್ರಯುಕ್ತ ನಡೆದ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಚನ ಸಂಶೋಧನೆ, ಸಂಗ್ರಹಣೆ, ಪರಿಷ್ಕರಣೆ, ಮುದ್ರಣ, ಪ್ರಕಾಶನ, ಪ್ರಚಾರ, ಪ್ರಸಾರ ಹಾಗೂ ಇಂಗ್ಲೀಷ್ ಭಾಷೆಗೆ ವಚನಗಳ ಅನುವಾದ ಇವುಗಳಲ್ಲಿ ತೊಡಗಿಸಿಕೊಂಡು ವಚನಗಳನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಟ್ಟರು ಎಂದು ಮಾರುತಿ ದಾಸಣ್ಣವರ್ ವಿವರಿಸಿದರು. ವಚನ ಸಾಹಿತ್ಯ, ಅಂಕಣ ಬರಹಗಳು ಇಂತಹ ಅಮೂಲ್ಯ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸಿ, ನಾಡಿಗೆ ನೀಡಿದ ಡಾ.ಫ.ಗು.ಹಳಕಟ್ಟಿ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು. ಶಿಕ್ಷಣ ನಂತರ ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಫ.ಗು.ಹಳಕಟ್ಟಿ  ವಚನ ಸಾಹಿತ್ಯ ಸಂಗ್ರಹ ಹಾಗೂ ಮುದ್ರಣಕ್ಕಾಗಿಯೇ ವಕೀಲ ವೃತ್ತಿಯನ್ನು ಬಿಟ್ಟು ವಚನ ಸಂಗ್ರಹಕ್ಕೆ ಬದುಕು ಮೀಸಲಿಟ್ಟ ಧೀಮಂತ ಎಂದು ಅವರು ವರ್ಣಿಸಿದರು. ಅನೇಕ ಬಾರಿ ಸೈಕಲ್ ಏರಿ ಊರೂರು ಅಲೆಯುವುದು, ತಾಳೆ ಗರಿ, ಓಲೆಕಟ್ಟುಗಳನ್ನು ಸಂಗ್ರಹಿಸಿ ಪುಸ್ತಕ ಮುದ್ರಣಕ್ಕೆ ಮುಂದಾದರು. ಇದರಿಂದ ಆರ್ಥಿಕ ತೊಂದರೆಗೂ ಸಿಲುಕಿದ್ದರು. ಆದರೂ ಯಾವುದನ್ನು ಲೆಕ್ಕಿಸದೆ ಜೀವನವನ್ನೇ ವಚನ ಸಾಹಿತ್ಯ ಸಂಗ್ರಹಕ್ಕೆ ಮೀಸಲಿಟ್ಟ ಅಪ್ರತಿಮ ಎಂದು ಮಾರುತಿ ದಾಸಣ್ಣವರ್ ನುಡಿದರು. ಫ.ಗು.ಹಳಕಟ್ಟಿ 20ನೇ ಶತಮಾನದಲ್ಲಿ ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸಿದರು. ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾಸಂಸ್ಥೆ ಸ್ಥಾಪಿಸಿದರು. ಸ್ವಾತಂತ್ರ್ಯ ಆಂದೋಲನ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮಾರುತಿ ದಾಸಣ್ಣವರ್ ವಿವರಿಸಿದರು. ಕರ್ನಾಟಕ ಏಕೀಕರಣ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹಾಗೆಯೇ 1926 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ಸ್ಮರಿಸಿದರು. ವಚನ ಪಿತಾಮಹ, ಪಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು 1880 ರ ಜುಲೈ 2 ರಂದು ಜನಿಸಿದರು. 1964ರ ಜೂನ್, 29 ರಂದು ಲಿಂಗೈಕರಾದರು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮಾತನಾಡಿ, 1920ರ ಹೊತ್ತಿಗೆ ಒಂದು ಸಾವಿರ ವಚನಗಳ ಕಟ್ಟು ಸಂಗ್ರಹವಾಯಿತು. ಹೇಗಾದರೂ ಮಾಡಿ ಇದನ್ನು ಪ್ರಕಟಿಸಬೇಕೆಂದು 500 ರೂ.ಗಳೊಂದಿಗೆ ಆ ಹಸ್ತಪ್ರತಿಯನ್ನು ಮಂಗಳೂರಿನ ಬಾಶೆಲ್ ಮಿಶನ್ ಮುದ್ರಣಕ್ಕೆ ಕಳಿಸಿದರು. ಅದುವರೆಗೆ ಕವಿ ಚರಿತೆಕಾರರು ಕೇವಲ 50 ವಚನಕಾರರನ್ನು ಗುರುತಿಸಿದರು. ಫ.ಗು.ಹಳಕಟ್ಟಿಯವರು 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು. ಹಳಕಟ್ಟಿಯವರು 1925 ರಲ್ಲಿ ಇರುವ ಮನೆ ಮಾರಿ ‘ಹಿತ ಚಿಂತಕ ಮುದ್ರಣಾಲಯ’ ಎಂಬ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು ಎಂದು ತಿಳಿಸಿದರು. ಹಳಕಟ್ಟಿಯವರು ಪತ್ರಿಕೋದ್ಯಮದಲ್ಲೂ ಗಣನೀಯವಾದ ಸೇವೆ ಸಲ್ಲಿಸಿದರು. ಅವರು ಆರಂಭಿಸಿದ ‘ಶಿವಾನುಭವ’ ಎಂಬ ಮಾಸಿಕ ಪತ್ರಿಕೆ 35 ವರ್ಷಗಳವರೆಗೆ ನಡೆದದ್ದು ಅದರ ಹೆಗ್ಗಳಿಕೆ. ಅಷ್ಟು ಮಾತ್ರವಲ್ಲದೇ 1925 ರಲ್ಲಿ ‘ನವಕರ್ನಾಟಕ’ ಎಂಬ ವಾರ ಪತ್ರಿಕೆಯನ್ನು ಆರಂಭಿಸಿದರು. ಅವರು ಸಂಪಾದಿಸಿ ಪ್ರಕಟಿಸಿದ ವಚನ ಸಾಹಿತ್ಯ ಸಾರವಂತೂ ಅಪರೂಪ ವಚನಗಳುಳ್ಳ ಒಂದು ಅದ್ಭುತ ಕೃತಿ. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಮುಂತಾದ ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟರು ಎಂದು ವಿವರಿಸಿದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿ ಕಾಯಕ, ದಾಸೋಹ ಮತ್ತು ಮಹಾಮನೆಗಳಂತಹ ಅಪೂರ್ವವಾದ ಪರಿಕಲ್ಪನೆಗನ್ನು ಮನುಷ್ಯನ ಜೀವನದಲ್ಲಿ ತಂದು ಬದುಕನ್ನೇ ಒಂದು ತಪಸ್ಸಾಗಿಸಿದವರು. ಇಂತಹ ಅಪೂರ್ವ ನಿಧಿಯನ್ನು ನಮಗೆ ಹುಡುಕಿ ಮೊಗೆ ಮೊಗೆದು ಕೊಟ್ಟವರೇ ನಮ್ಮ ಫ.ಗು.ಹಳಕಟ್ಟಿ ಎಂದು ನುಡಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ವಚನ ಸಾಹಿತ್ಯದಿಂದ ನಾಡಿನ ಆಸ್ಮಿತೆ ತಿಳಿಯಲಿದೆ ಎಂದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಬ್ಲಾಸಂ ಶಾಲೆಯ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾನಡ್ಕ ಕುಟುಂಬದಿoದ 12ನೇ ವರ್ಷದ ಯುಗಾದಿ ಕ್ರೀಡಾಕೂಟದ ಸಂಭ್ರಮ : ಕ್ರೀಡೆಗಳಿಂದ ಹಬ್ಬದ ಮೆರುಗು ಇಮ್ಮಡಿ*

ಮಾರ್ಚ್ 22, 2026

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026

*ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*

ಮಾರ್ಚ್ 22, 2026

*ಸಮೀರ್ ಗೆ “ರತ್ನ ಶ್ರೀ” ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ*

ಮಾರ್ಚ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.22 : ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಮೀರ್ ಎಂ. ಮಡಿಕೇರಿ…

*ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಕಾಡಾನೆ ಸೆರೆ*

ಮಾರ್ಚ್ 22, 2026

*ಹಾಕತ್ತೂರಿನ “ಯುವ ಸ್ಪಂದನ ಯೂತ್ ಫೌಂಡೇಶನ್” ಗೆ ನೂತನ ಪದಾಧಿಕಾರಿಗಳ ಆಯ್ಕೆ*

ಮಾರ್ಚ್ 22, 2026

*ಕಾಡಾನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ*

ಮಾರ್ಚ್ 21, 2026

*ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನ : ಸಿಎನ್‌ಸಿ ವಿಚಾರಣ ಸಂಕಿರಣ : ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ಕೊಡವರು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿಲ್ಲ : ಕೆ.ಪಿ.ಬಾಲಸುಬ್ರಹ್ಮಣ್ಯ ಅಭಿಮತ*

ಮಾರ್ಚ್ 21, 2026

*ಕಾರು ಮತ್ತು ಬೈಕ್ ಗಳ ನಡುವೆ ಡಿಕ್ಕಿ : ಇಬ್ಬರ ಸಾವು*

ಮಾರ್ಚ್ 21, 2026

*ವಿರಾಜಪೇಟೆ : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ*

ಮಾರ್ಚ್ 21, 2026

*ಕೂಡಿಗೆ : ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ : ಶಿಕ್ಷಕರ ಸೇವೆ ಅನನ್ಯ : ಎಸ್.ಎ.ಯೋಗೇಶ್*

ಮಾರ್ಚ್ 21, 2026

*ಭಾಗಮಂಡಲದಲ್ಲಿ ಜನಸ್ಪಂದನ ಸಭೆ : ಸಾರ್ವಜನಿಕರಿಂದ 85 ಅರ್ಜಿ ಸಲ್ಲಿಕೆ*

ಮಾರ್ಚ್ 21, 2026

*ಕಳೆದ ಮೂರು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆಗೆ ಹೆಚ್ಚಿನ‌ ಪ್ರಾಧಾನ್ಯತೆ ನೀಡಿದೆ : ಶಾಸಕ ಎ.ಎಸ್.ಪೊನ್ನಣ್ಣ*

ಮಾರ್ಚ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.