
ಮಡಿಕೇರಿ NEWS DESK ಜು.2 : ಐತಿಹಾಸಿಕ ಮಡಿಕೇರಿ ದಸರಾದ ಆಕರ್ಷಣೆಗಳಲ್ಲಿ ಒಂದಾದ ದಶಮಂಟಪಗಳ ಸಮಿತಿಯ ನೇತೃತ್ವವನ್ನು 2025ರಲ್ಲಿ ಶ್ರೀ ಕೋಟೆ ಮಹಾಗಣಪತಿ ದೇವಾಲಯದ ದಸರಾ ಸಮಿತಿ ವಹಿಸಿಕೊಳ್ಳುತ್ತಿದ್ದು, ಅಧ್ಯಕ್ಷರಾಗಿ ಬಿ.ಎಂ.ಹರೀಶ್ ಅಣ್ವೇಕರ್ ಆಯ್ಕೆಯಾಗಿದ್ದಾರೆ. ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಶ್ರೀ ಕೋಟೆ ಮಹಾಗಣಪತಿ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೋಟೆ ಶ್ರೀ ಮಹಾಗಣಪತಿ ದಸರಾ ಮಂಟಪ ಸಮಿತಿಯ ಅಧ್ಯಕ್ಷರಾಗಿ ವಿಘ್ನೇಶ್ ಸಿ.ಯು ಆಯ್ಕೆಗೊಂಡರು. ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅದ್ದೂರಿ ದಸರಾ ಆಚರಣೆಯ ಕುರಿತು ಚರ್ಚಿಸಿದರು. ಇದೇ ಸಂದರ್ಭ ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆಯಿಂದ ಕುಶಾನಗರಕ್ಕೆ ವರ್ಗಾವಣೆಗೊಂಡ ಎಎಸ್‌ಐ ನಂದ ಐ.ಪಿ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. *ಪುಸ್ತಕ ಬಿಡುಗಡೆ* 49ನೇ ವರ್ಷದ ದಸರಾ ಆಚರಣೆಯ ಸಂಭ್ರಮದಲ್ಲಿರುವ ಶ್ರೀ ಕೋಟೆ ಮಹಾಗಣಪತಿ ದಸರಾ ಸಮಿತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಸರಾ ವಂತಿಗೆ ಸಂಗ್ರಹದ ಪುಸ್ತಕವನ್ನು ಬಿಡುಗಡೆಗೊಳಿಸಿತು.










