
ಮಡಿಕೇರಿ ಜು.3 NEWS DESK : ಭಾರತೀಯ ಸೇನೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧ ಹೆಚ್.ಎಸ್.ಕೃಷ್ಣಪ್ಪ ಅವರಿಗೆ ಹೆಬ್ಬಾಲೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಲೇಡಿ ಬರಮಾಡಿಕೊಳ್ಳಲಾಯಿತು. ಚೆನ್ನೈ ನಿಂದ ಊರಿಗೆ ಬಂದ ಯೋಧ ಕೃಷ್ಣಪ್ಪ ಅವರ ಕುಟುಂಬಸ್ಥರ ಮೇಲೆ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಅಭಿಮಾನಿಗಳು ಪುಷ್ಪಮಳೆಗೆರೆದರು. ಹೆಬ್ಬಾಲೆ ಗ್ರಾಮಸ್ಥರು, ಕೃಷ್ಣಪ್ಪ ಗೆಳೆಯರ ಬಳಗ ಹಾಗೂ ಕೃಷ್ಣಪ್ಪ ಅಭಿಮಾನಿಗಳು ವೀರಯೋಧ ಕೃಷ್ಣಪ್ಪ ಅವರ ಕುಟುಂಬವನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು. ಅಭಿಮಾನಿಗಳು ಬೃಹತ್ ಹೂವಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು. ಇದೇ ವೇಳೆ ಯೋಧ ಹಾಗೂ ದೇಶದ ಪರವಾಗಿ ಘೋಷಣೆ ಕೂಗುವ ಮೂಲಕ ಯುವಕರ ದೇಶಪ್ರೇಮ ಬಿಂಬಿಸಿದರು. ಅಭಿಮಾನಿಗಳು ಹೆಬ್ಬಾಲೆ ಸರ್ಕಲ್ ನಲ್ಲಿ ಪಟಾಕಿ ಸಿಹಿಸಿ ,ಸಿಹಿ ವಿತರಿಸಿ ಸಂಭ್ರಮಿಸಿದರು. ಅಲಂಕೃತ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಂತರ ತಮ್ಮ ಮನೆಗೆ ಆಗಮಿಸಿದಾಗ ಮನೆಯವರು ಆರತಿಯೊಂದಿಗೆ ಯೋಧನ ಕುಟುಂಬವನ್ನು ಬರಮಾಡಿಕೊಂಡರು. ಇದೇ ಸಂದರ್ಭ ಹೆಬ್ಬಾಲೆ ಸರ್ಕಾರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಿವೃತ್ತ ಯೋಧ ಕೃಷ್ಣಪ್ಪ ಹಾಗೂ ಪೂರ್ಣಿಮಾ ಕೃಷ್ಣಪ್ಪ ಅವರು ಉಚಿತವಾಗಿ ಮಕ್ಕಳಿಗೆ ಟೀಶರ್ಟ್ ವಿತರಣೆ ಮಾಡಿದರು. ಈ ಸಂದರ್ಭ ಶಾಲಾ ಮಕ್ಕಳು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಶಾಲಾ ಗುರುಗಳಾದ ಹೆಚ್.ಎನ್.ನಾಗಾಚಾರಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಯೋಧ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು ನಂತರ ಶಾಲಾ ಆವರಣದಲ್ಲಿ ಗಿಡನೆಟ್ಟು ನೀರು ಹಾಕುವ ಕಾರ್ಯಕ್ರಮ ನಡೆಯಿತು.










