
ಮಡಿಕೇರಿ ಜು.7 NEWS DESK : ಮಡಿಕೇರಿ ತಾಲ್ಲೂಕು ಬಂಟರ ಸಂಘದ ವತಿಯಿಂದ 2023-24 ಮತ್ತು 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ಬಂಟ ಸಮೂಹದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದ್ದು, ಆಸಕ್ತ ಅರ್ಹ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದೆಂದು ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರೈ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ಬಂಟರ ಸಂಘದಿಂದ ನಡೆಸಲಾಗುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವನ್ನು ಈ ಸಾಲಿನಿಂದ ಮಡಿಕೇರಿ ತಾಲ್ಲೂಕು ಬಂಟರ ಸಂಘ ನಡೆಸಲಿದೆ. ಈ ಪ್ರತಿಭಾ ಪುರಸ್ಕಾರಕ್ಕೆ ಜಿಲ್ಲಾ ವ್ಯಾಪ್ತಿಯಲ್ಲಿನ ಬಂಟ ಸಮೂಹದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ಸ್ಪಷ್ಟ ಪಡಿಸಿದರು. ಆಸಕ್ತ ಅರ್ಹ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ಅಂಕ ಪಟ್ಟಿಯ ನಕಲು, ದೂರವಾಣಿ ಸಂಖ್ಯೆ, ಪೋಷಕರ ಆಧಾರ್ ಕಾರ್ಡ್ನೊಂದಿಗೆ ಜು.30ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ವಿದ್ಯಾರ್ಥಿ ಪುರಸ್ಕಾರ ಸಮಾರಂಭದ ದಿನಾಂಕವನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆಂದು ಹೇಳಿದರು. ಅರ್ಜಿಗಳನ್ನು ಸದಾಶಿವ ರೈ, ಅಧ್ಯಕ್ಷರು, ಮಡಿಕೇರಿ ತಾಲ್ಲೂಕು ಬಂಟರ ಸಂಘ, ಕೆ/ಆಫ್ ಭೂಮಿಕ ಕನ್ಸಲ್ಟೆನ್ಸಿ, ಸಂಖ್ಯೆ 3, ಅಂಬಿಕ ಹೋಟೆಲ್ ಹತ್ತಿರ, ನಗರ ಸಭೆ ಕಾಂಪ್ಲೆಕ್ಸ್, ಮಡಿಕೇರಿ ಇಲ್ಲಿಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಸದಾಶಿವ ರೈ ಮೊ. 9480290688, ಚಂದ್ರಶೇಖರ್ ರೈ ಮೊ.7829768736, ವಿಠಲ ರೈ ಮೊ.9071673722, ಶಶಿಕಲಾ ರೈ ಮೊ.8105490618ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಮಡಿಕೆೇರಿ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಸದಾಶಿವ ರೈ, ಖಜಾಂಚಿ ದಿವೇಶ್ ರೈ, ಗೌರವ ಸಲಹೆಗಾರರಾದ ಬಿ.ಸಿ. ಹರೀಶ್ ರೈ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ರೈ, ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ರವಿ ರೈ ಉಪಸ್ಥಿತರಿದ್ದರು.








