Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*
  • *ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*
  • *ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*
  • *ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*
  • *ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*
  • *ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*
  • *ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*
  • *ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*
  • *ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 1007 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ*
ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ ಕೊಡಗು ಜಿಲ್ಲೆ

*ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 1007 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ*

ಜುಲೈ 8, 20256 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೇರೆ ಬೇರೆ ವಿಷಯಗಳಲ್ಲಿ ಪದವಿ ಪಡೆದಿರುವವರಿಗೂ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯುತ್ತದೆ. ಇಂಥ ವಿಶೇಷ ಪದವಿಗಳೊಂದಿಗೆ ವಿಶೇಷ ಅಧಿಕಾರಿ  (ಸ್ಪೆಷಲಿಸ್ಟ್ ಆಫೀಸರ್) ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರು, ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕುಗಳಲ್ಲಿ ಉದ್ಯೋಗ ಎನ್ನುವಂತಿತ್ತು. ಆದರೆ, ಈಗ ಇವೆರಡರ ಜೊತೆಗೆ, ಕಾನೂನು, ಎಂಜಿನಿಯರಿಂಗ್, ಮಾರ್ಕೆಟಿಂಗ್, ಮ್ಯಾನೇಜ್ಮೆಂಟ್ ಸೇರಿದಂತೆ ಬೇರೆ ಬೇರೆ ವಿಷಯಗಳಲ್ಲಿ ಪದವಿ ಪಡೆದಿರುವವರಿಗೂ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯುತ್ತಿದೆ. ಇಂಥ ವಿಶೇಷ ಪದವಿಗಳೊಂದಿಗೆ ವಿಶೇಷ ಅಧಿಕಾರಿ (ಸ್ಪೆಷಲಿಸ್ಟ್ ಆಫೀಸರ್) ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್- ಐಬಿಪಿಎಸ್) ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಇಂಥ ಸ್ಪೆಷಲ್ ಆಫೀಸರ್‍ಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್ಲೈ ನ್ ಮೂಲಕ (https://www.ibps.in) ಅರ್ಜಿ ಸಲ್ಲಿಸಬೇಕು.  ಹುದ್ದೆಯ ಹೆಸರು: ಜೂನಿಯರ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಟೇಲ್ -1  :: ವೇತನಶ್ರೇಣಿ :: 48, 480-85, 920 ರೂ.ದಲ್ಲದೆ ಬ್ಯಾಂಕ್ ಹೆಚ್ಚುವರಿಯಾಗಿ, ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವಸತಿ ಕ್ವಾರ್ಟರ್ಸ್/ಲೀಸ್ ಬಾಡಿಗೆ, ಬ್ಯಾಂಕಿನ ನೀತಿಯ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ ಎಲ್‍ಎಫ್‍ಸಿ ಮರುಪಾವತಿಯಂತಹ ಇತರ ಭತ್ಯೆಗಳನ್ನು ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪಾವತಿಸಲಾಗುವುದು.

ಯಾವ್ಯಾವ ಬ್ಯಾಂಕ್ ಗಳಲ್ಲಿ ಯಾವ್ಯಾವ ಹುದ್ದೆ :: ಐಟಿ ಆಫೀಸರ್, ಅಗ್ರಿಕಲ್ಬರಲ್ ಫೀಲ್ಡ್ ಆಫೀಸರ್, ರಾಜ್ಭಾ ಷಾ ಅಧಿಕಾರಿ, ಲಾ ಆಫೀಸರ್, ಹೆಚ್‍ಆರ್/ಪರ್ಸನಲ್ ಆಫೀಸರ್, ಮಾರ್ಕೆಟಿಂಗ್ ಆಫೀಸರ್

1ಬ್ಯಾಂಕ್ ಆಫ್ ಮಹಾರಾಷ್ಟ್ರ – 80, 80, 10, 30

2ಇಂಡಿಯನ್ ಒವರಸೀಸ್ ಬ್ಯಾಂಕ್ – 20,80,14

3 ಪಂಜಾಬ್ ನ್ಯಾಷನಲ್ ಬ್ಯಾಂಕ್- 100, 150, 10, 350

4ಬ್ಯಾಂಕ್ ಆಫ್ ಇಂಡಿಯ- 03, 01, 01

5ಬ್ಯಾಂಕ್ ಆಫ್ ಬರೋಡಾ – 23, 10

6ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 20, 25

ಒಟ್ಟು 203, 310, 78, 56, 10 = 350

ಅರ್ಜಿ ಶುಲ್ಕ : ಸಾಮಾನ್ಯ , ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ : 850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ – 175. ನೋಂದಣಿ ನಂತರ ಅಭ್ಯರ್ಥಿಗಳು ಆನ್ಲೈನ್  ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ/ಇಂಟಿಮೇಷನ್ ಶುಲ್ಕ /ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ. :: ವಯೋಮಿತಿ ::  01.08.2025ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ ಅಭ್ಯರ್ಥಿಗಳು 02.07.1995 ಕ್ಕಿಂತ ಮುಂಚಿತವಾಗಿ ಮತ್ತು 01.07.2005ರ ನಂತರ ಜನಿಸಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ. :: ನೇಮಕಾತಿ ಪ್ರಕ್ರಿಯೆ :: ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಪೂರ್ವ ಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ. ಎರಡೂ ಲಿಖಿತ ಪರೀಕ್ಷೆಗಳೂ ಆನ್ಲೈನ್ ಮೂಲಕ ನಡೆಯಲಿವೆ. ಪೂರ್ವ ಭಾವಿ ಪರೀಕ್ಷೆಯಲ್ಲಿ ಆಯ್ಕೆಯಾದವರು, ಮುಖ್ಯ ಪರೀಕ್ಷೆಗೆ ಹಾಜರಾಗಬೇಕು. ಮುಖ್ಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನವಿದೆ. ಪರೀಕ್ಷೆಗಳು ಇಂಗ್ಲಿಷ್/ ಹಿಂದಿ ಭಾಷೆಯಲ್ಲಿರಲಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. :: ಅರ್ಜಿ ಸಲ್ಲಿಸಲು ವೆಬ್ ಲಿಂಕ್ ::  https://ibpsreg.ibps.in/crpspxvjun25/ಹಾಗೂ ಅಧಿಸೂಚನೆಗೆ :: www.ibps.in

ಪರೀಕ್ಷಾ ಪ್ರಕ್ರಿಯೆ: 

ಮೊದಲನೇ ಹಂತ :: ಪೂರ್ವ ಭಾವಿ ಪರೀಕ್ಷೆ. ಇದು ಈ ವರ್ಷದ  ಆಗಸ್ಟ್ ತಿಂಗಳಲ್ಲಿ ನಡೆಯಲಿದೆ.

ಎರಡನೇ ಹಂತ :: ಮುಖ್ಯ ಪರೀಕ್ಷೆ. ಇದು ನವೆಂಬರ್ ನಲ್ಲಿ ನಿಗದಿಯಾಗಿದೆ.

ಮೂರನೇ ಹಂತ :: ಸಂದರ್ಶನ – 2025 ರ ಡಿಸೆಂಬರ್/ಜನವರಿ  2026 ರಂದು ನಡೆಯುವ ಸಾಧ್ಯತೆ ಇದೆ.

ಪರೀಕ್ಷಾ ಕೇಂದ್ರಗಳು: ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ:: ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಹುಬ್ಬಳ್ಳಿ- ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ.

ಶೈಕ್ಷಣಿಕ ಅರ್ಹತೆ: (21.07.2025 ಕ್ಕೆ ಅನ್ವಯಿಸುವಂತೆ)

1)ಐಟಿ ಆಫೀಸರ್ ಹುದ್ದೆ:  ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ / ಇನ್ಫಾರ್ಮೆಷನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್ಸ್/ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಷನ್ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಅಥವಾ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ಟ್ರುಮೆಂಟೇಷನ್/ಕಂಪ್ಯೂಟರ್ ಸಾಯನ್ಸ್ /ಇನ್ಫಾರ್ಮೆಷನ್ ಟೆಕ್ನಾಲಜಿ/ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು  ಅಥವಾ ಪದವಿ ಜೊತೆಯಲ್ಲಿ DOEACC “B” ಲೆವೆಲ್ ಪರೀಕ್ಷೆ ಪಾಸಾಗಿರಬೇಕು. 2)ಅಗ್ರಿಕಲ್ಬರಲ್ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ / ಪಶುಸಂಗೋಪನೆ,/ ಪಶು ವೈದ್ಯ ಕೀಯ ವಿಜ್ಞಾನ/ ಡೇರಿ ಸೈನ್ಸ್/ ಅಗ್ರಿ ಎಂಜಿನಿಯರಿಂಗ್/ ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ /ಅರಣ್ಯ / ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯವಹಾರ ನಿರ್ವ ಹಣೆ/ ಆಹಾರ ತಂತ್ರಜ್ಞಾನ/ ಡೇರಿ ತಂತ್ರಜ್ಞಾನ / ಕೃಷಿ ಎಂಜಿನಿಯರಿಂಗ್/ ರೇಷ್ಮೆ ಕೃಷಿ/ ಮೀನುಗಾರಿಕೆ ಎಂಜಿನಿಯರಿಂಗ್ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು. 3)ಲಾ ಆಫೀಸರ್: ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಬಾರ್ ಕೌನಿಲ್‍ನ ಸದಸ್ಯತ್ವ ಪಡೆದಿರಬೇಕು. 4)ರಾಜಭಾಷಾ ಅಧಿಕಾರಿ ಹುದ್ದೆ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ – ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು. 5)ಹೆಚ್ ಆರ್/ಪರ್ಸನಲ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಷನ್ಸ್ ಎಚ್‍ಆರ್/ ಎಚ್‍ಆರ್ಡಿ / ಸೋಷಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಮಾಡಿರಬೇಕು. 6)ಮಾರ್ಕೆಟಿಂಗ್ ಆಫೀಸರ್: ಪದವೀಧರರಾಗಿರಬೇಕು ಮತ್ತು ಎರಡು ವರ್ಷಗಳ ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್)/PGDBA /PGDBM/PGPM/PGDM ಮಾರ್ಕೆಟಿಂಗ್ ನಲ್ಲಿ ಸ್ಪೆಷಲೈಸೇಷನ್ ಮಾಡಿರಬೇಕು.  ಗಮನಿಸಿ: ಐಟಿ ಆಫೀಸರ್ ಸ್ಕೇಲ್-I ಹೊರತುಪಡಿಸಿ ಬೇರೆ ಹುದ್ದೆಗಳಿಗೆ ಅಭ್ಯರ್ಥಿಯು ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರ ವನ್ನು ಕೂಡ ಅಭ್ಯರ್ಥಿಯು ಹೊಂದಿರಬೇಕಾಗುತ್ತದೆ.

ಕ್ರೆಡಿಟ್ ಇತಿಹಾಸ:  (i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸ ಹೊಂದಿರಬೇಕು. ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ ಸಿಬಿಲ್ ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ. ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ. (ii) ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು ಸಿಬಿಲ್ ಸ್ಥಿತಿ ನವೀಕರಿಸಬೇಕು ಅಥವಾ ಸಿಬಿಲ್ ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.

ಗಮನಿಸಿ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು ಸಿಬಿಲ್ ಸ್ಥಿತಿಯನ್ನು ಒದಗಿಸುವ ಅಗತ್ಯ ವಿಲ್ಲ.

ನೇಮಕ ಹೇಗೆ :: ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು, (ಪ್ರತಿ ಪತ್ರಿಕೆಗೂ  40 ನಿಮಿಷಗಳಂತೆ  ಒಟ್ಟಾರೆ 120 ನಿಮಿಷಗಳು) 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಇಂಗ್ಲೀಷ್ ಲಾಂಗ್ವೇಜ್ ಗೆ 50 ಪ್ರಶ್ನೆ/25 ಅಂಕಗಳಿದ್ದು, ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಗೆ 50 ಪ್ರಶ್ನೆ / 50, ಹಾಗೂ ರೀಸನಿಂಗ್ ಎಬಿಲಿಟಿಯ 50 ಪ್ರಶ್ನೆ/50 ಅಂಕಗಳಿರಲಿವೆ.(ಇದು ರಾಜ್ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆಗಳಿಗೆ  ಹೊರತಾಗಿ.ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್  ಅಪ್ಟಿಟ್ಯೂಡ್ ಪರೀಕ್ಷೆ ಬದಲಾಗಿ ಜನರಲ್ ಅವೇರನ್ಸ್ ವಿಥ್ ಸ್ಪೆಶಲ್ ರೆಫೆರೆನ್ಸ್ ವಿಥ್ ಬ್ಯಾಂಕಿಂಗ್ ಇಂಡಸ್ಟ್ರಿ 50 ಅಂಕಗಲಿಗೆ 50 ಪ್ರಶ್ನೆಗಳಿರಲಿವೆ.) ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು, ನಿಗದಿತ ದಿನದಂದು ಆನ್ ಲೈನ್ನಲ್ಲಿಯೇ ಪರೀಕ್ಷೆ ನಡೆಯಲಿವೆ. ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನಕ್ಕೆ ಸಂಭಂದಿಸಿದ್ದು 45 ನಿಮಿಷಗಳ ಕಾಲ ನಡೆಯಲಿದ್ದು, 60 ಪ್ರಶ್ನೆಗಳನ್ನು  60 ಅಂಕಗಳಿಗೆ ಕೇಳಲಾಗುತ್ತದೆ.(ರಾಜ ಭಾಷಾ ಅಧಿಕಾರಿಗಳ ಹುದ್ದೆಗಳಿಗೆ ಡಿಸ್ಕೃಪ್ಟಿವ್ ಟೆಸ್ಟ್ ಎರಡು ಹಂತಗಳಲ್ಲಿ ನಡೆಯಲಿದ್ದು  ವೃತ್ತಿಪರ ಜ್ಞಾನಕ್ಕೆ ಸಂಭಂದಿಸಿದ 45 ಪ್ರಶ್ನೆ ಒಬ್ಜೆಕ್ಟಿವ್ ಮಾದರಿಯಲ್ಲಿದ್ದು,ವ್ತತ್ತಿಪರ ಜ್ಞಾನಕ್ಕೆ ಸಂಬಂದಿಸಿದಂತೆ ಇನ್ನೊಂದು ಡಿಸ್ಕ್ರೆಪ್ಟಿವ್ ಪತ್ರಿಕೆಯಲ್ಲಿ ಎರಡು ಪ್ರಶ್ನೆಗಳಿರಲಿದ್ದು ಅವಧಿ ಎರಡೂ ಪರೀಕ್ಷೆಗೆ 30 ನಿಮಿಷಗಳಂತೆ ಒಟ್ಟಾರೆ ಒಂದು ಗಂಟೆಯ ಅವಧಿ ನೀಡಲಾಗಿದ್ದು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

ಗಮನಿಸಿ: ಈ ಹಿಂದಿನಂತೆ ಇದ್ದ  ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ ಮಾಡಿದ್ದು ಈ ಸಲ   ವೃತ್ತಿಪರ ಜ್ಞಾನ ದ ಪರೀಕ್ಷೆ ಬರೆಯಬೇಕು .(ಸ್ಪೇಶಲಿಸ್ಟ್ ಹುದ್ದೆಗಳಾಗಿರೋದರಿಂದ) ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ಕನ್ನಡದಲ್ಲಿ ಪರೀಕ್ಷೆ ನಡೆಯೊಲ್ಲ :: ಮುಖ್ಯ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಸಂದರ್ಶನ (100 ಅಂಕಗಳು) ಬ್ಯಾಂಕ ನಡೆಸಲಿವೆ. ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ’)ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಆಯ್ಕೆ ಪಟ್ಟಿ: ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಮುಖ್ಯ ಪರೀಕ್ಷೆಯಲ್ಲಿ  ಪಡೆದ ಅಂಕಗಳು (ಹಂತ- 2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3 ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ-2 ರಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು (60 ಅಂಕಗಳನ್ನು 100 ಕ್ಕೆ ಪರಿವರ್ತನೆ ಮಾಡಿ) ಅದರ  80% ಅಂಕಗಳು ಮತ್ತು ಅಭ್ಯರ್ಥಿಗಳ ಹಂತ-3 ರಲ್ಲಿ ಪಡೆದ ಅಂಕಗಳನ್ನು (100 ಅಂಕಗಳಲ್ಲಿ)  ಅದರ 20% ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಪ್ರತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು.

ಗಮನಿಸಿ : ಅಭ್ಯರ್ಥಿಗಳ ಲಭ್ಯತೆಗೆ ಒಳಪಟ್ಟು, ಪ್ರತಿ ಹುದ್ದೆಗೆ ಪ್ರತಿ ವರ್ಗದ ಅಡಿಯಲ್ಲಿ ಖಾಲಿ ಹುದ್ದೆಗಳಲ್ಲಿ ಸರಿಸುಮಾರು 20 ಪ್ರತಿಶತದಷ್ಟು ಮೀಸಲು ಪಟ್ಟಿಯನ್ನು ಇಟ್ಟುಕೊಳ್ಳಬಹುದು. ಇದು ಭಾಗವಹಿಸುವ ಬ್ಯಾಂಕ್(ಗಳು) ನಿಂದ ತಾತ್ಕಾಲಿಕ ಹಂಚಿಕೆ/ನೇಮಕಾತಿಯನ್ನು ಖಾತರಿಪಡಿಸುವುದಿಲ್ಲ.ತಾತ್ಕಾಲಿಕ ಹಂಚಿಕೆ ದಿನಾಂಕದ ನಂತರ ಮೀಸಲು ಪಟ್ಟಿಯ ಮಾನ್ಯತೆಯ ಅವಧಿಯೊಳಗೆ, ಭಾಗವಹಿಸುವ ಬ್ಯಾಂಕ್‍ಗಳು ಮತ್ತಷ್ಟು ಖಾಲಿ ಹುದ್ದೆಗಳನ್ನು ಒದಗಿಸಿದರೆ, ಆ ಅವಧಿಯಲ್ಲಿ ವಿಭಿನ್ನ ಮಧ್ಯಂತರಗಳಲ್ಲಿ ಒದಗಿಸಿದ ಖಾಲಿ ಹುದ್ದೆಗಳ ಆಧಾರದ ಮೇಲೆ, ಮೀಸಲು ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ಹಂಚಿಕೆಯನ್ನು ಮೂರರಿಂದ ನಾಲ್ಕು ಬಾರಿ ಕೈಗೊಳ್ಳಬಹುದು. ಬ್ಯಾಂಕಿನ ಅಧೀಕೃತ ವೆಬ್ ಸೈಟನ್ನೆ ಬಳಸಿ ಅಪ್ಲಾಯ್ ಮಾಡಿ. ಸೈಬರ್ ವಂಚಕರಿಂದ ದೂರವಿರಿ.ಸಾಧ್ಯವಾದಷ್ಟು ಮಾಹಿತಿ ಕ್ರೋಢೀಕರಿಸಿ ನೀಡಲು ಪ್ರಯತ್ನಿಸಿದ್ದೇವೆ.ಆದಾಗ್ಯೂ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಗಮನಿಸಿ.

ಮಾಹಿತಿ : ಆರ್.ಕೆ.ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು.  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ : ಸಾಧಕರಿಗೆ ಸನ್ಮಾನ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೋಮವಾರಪೇಟೆ : ಮಹಿಳೆಯರು ಶಿಕ್ಷಣ ಪಡೆಯಲು ಕೆ.ಹೆಚ್.ಧನಲಕ್ಷ್ಮೀ ಸಲಹೆ*

ಮಾರ್ಚ್ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸೋಮವಾರಪೇಟೆ ಮಾ.13 NEWS DESK : ಶಿಕ್ಷಣವೇ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಶಿಕ್ಷಣ ಪಡೆದ ಮಹಿಳೆ ಕುಟುಂಬದ ಅಭಿವೃದ್ಧಿಗೆ…

*ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ಶಾಸಕ ಎ.ಎಸ್.ಪೊನ್ನಣ್ಣರಿಂದ ಚೆಕ್ ವಿತರಣೆ*

ಮಾರ್ಚ್ 13, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ : ಆಧುನಿಕತೆಯ ಭರದಲ್ಲಿ ಸಂಸ್ಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ : ವಿನೋದ್ ಮೂಡಗದ್ದೆ*

ಮಾರ್ಚ್ 13, 2026

*ಗೋಣಿಕೊಪ್ಪ : ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ : ಜಗದೀಶ್ ಜೋಡುಬೀಟಿ*

ಮಾರ್ಚ್ 13, 2026

*ಗೋಣಿಕೊಪ್ಪ ಸೀನಿಯರ್ ಚೇಂಬರ್ “ಇಂಟರ್‌ನ್ಯಾಷನಲ್” ಸಂಸ್ಥೆಗೆ ಪ್ರಶಸ್ತಿಯ ಗರಿ*

ಮಾರ್ಚ್ 13, 2026

*ವನ್ಯಜೀವಿಗಳ ಉಪಟಳ ತಡೆಗೆ ಆಗ್ರಹ : ಅರಣ್ಯ ಭವನಕ್ಕೆ ಬಿಜೆಪಿ ಮುತ್ತಿಗೆ ಯತ್ನ : ಹೆದ್ದಾರಿ ತಡೆದು ಪ್ರತಿಭಟನೆ*

ಮಾರ್ಚ್ 13, 2026

*ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳನ : ಕಿಡಿಗೇಡಿಯ ಬಂಧನಕ್ಕೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಆಗ್ರಹ*

ಮಾರ್ಚ್ 13, 2026

*ಕಾಡಾನೆ ದಾಳಿ : ಸರಕಾರದ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ : ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ*

ಮಾರ್ಚ್ 13, 2026

*ಕುಶಾಲನಗರ : ಜೀವನದಲ್ಲಿ ಕಲಿಕೆ ನಿರಂತರ ಪ್ರಕ್ರಿಯೆ : ವನಿತಾ ಚಂದ್ರಮೋಹನ್*

ಮಾರ್ಚ್ 11, 2026

*ಕುಶಾಲನಗರ : ರಾಜಿ ಪ್ರಕರಣಗಳ ಮೂಲಕ ನ್ಯಾಯಾಧೀಶರ ಒತ್ತಡ ಕಡಿಮೆಯಾಗಲಿದೆ : ಹಿರಿಯ ಸಿವಿಲ್ ನ್ಯಾಯಾಧೀಶೆ : ಶುಭ*

ಮಾರ್ಚ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.