Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
  • *ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*
  • *ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*
  • *ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಜಿಲ್ಲೆಯ 201 ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ : ವಿಕಲಚೇತನರಿಗೆ ಸರ್ಕಾರದಿಂದ ಹಲವು ಸೌಲಭ್ಯ : ಸಂಸದ ಯದುವೀರ್*
ಇತ್ತೀಚಿನ ಸುದ್ದಿಗಳು

*ಜಿಲ್ಲೆಯ 201 ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ : ವಿಕಲಚೇತನರಿಗೆ ಸರ್ಕಾರದಿಂದ ಹಲವು ಸೌಲಭ್ಯ : ಸಂಸದ ಯದುವೀರ್*

July 8, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಜು.8 NEWS DESK : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ವಿಕಲಚೇತನರ ಇಲಾಖೆ ವತಿಯಿಂದ ‘ಸಾಮಾಜಿಕ ಆಧಾರಿತ ಸಿವಿಲ್’ ಯೋಜನೆಯಲ್ಲಿ ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿತರಿಸಿದರು. ನಗರದ ರೆಡ್‍ಕ್ರಾಸ್ ಭವನದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯ 201 ವಿಕಲಚೇತನರಿಗೆ 20 ಲಕ್ಷ ರೂ.ವೆಚ್ಚದ 344 ಸಾಧನ ಸಲಕರಣೆ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಅವಲಂಬಿತರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಬೇಕಿದೆ. ಆದ್ದರಿಂದ ಸರ್ಕಾರ ಅಗತ್ಯ ಸಾಧನ ಉಪಕರಣ ಕಲ್ಪಿಸುತ್ತಿದೆ ಎಂದು ತಿಳಿಸಿದರು. ರಾಷ್ಟ್ರದ ಅಭಿವೃದ್ಧಿಗೆ ವಿಕಲಚೇತನರು ಸಹ ಹಲವು ಕೊಡುಗೆ ನೀಡಿದ್ದು, ವಿಕಲಚೇತನರು ಇತರರಂತೆ ಬದುಕು ನಡೆಸುವಂತಾಗಲು ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ ಎಂದು ಸಂಸದರು ನುಡಿದರು. ಭಾರತ ಬಲಿಷ್ಠ ಹಾಗೂ ಆದರ್ಶ ಸಮಾಜ ನಿರ್ಮಾಣ ಮಾಡಲು ಎಲ್ಲರ ಕೊಡುಗೆ ಅಗತ್ಯ. ಜವಾಬ್ದಾರಿಯುತ ಸಮಾಜ ನಿರ್ಮಾಣದಲ್ಲಿ ವಿಕಲಚೇತನರಿಗೆ ಸಾಧ್ಯವಾದಷ್ಟು ಸಹಕಾರ ನೀಡುವಂತಾಗಬೇಕು ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದಡಿ ಸಮಗ್ರ ಸಂಪೂರ್ಣ ಅಭಿವೃದ್ಧಿ ಆಗಬೇಕಿದೆ. ಪ್ರತಿಯೊಬ್ಬರ ಪಾತ್ರವು ಪ್ರಮುಖವಾಗಿದೆ. ನವ ಭಾರತ ನಿರ್ಮಾಣಕ್ಕೆ ಎಲ್ಲರ ಕೊಡುಗೆ ಅಗತ್ಯ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಿ ಹೇಳಿದರು. ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ವಿಕಲಚೇತನರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕು ನಡೆಸಲು ಹಲವು ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಹೇಳಿದರು. 2047 ರೊಳಗೆ ವಿಕಸಿತ ಭಾರತ ಆಗಬೇಕು ಎಂಬ ದೃಷ್ಟಿಯಿಂದ ಸಮಾಜದ ಕಟ್ಟಕಡೆಯವರನ್ನು ಗುರುತಿಸಿ ವಿಕಲಚೇತನರು ಸೇರಿದಂತೆ ಎಲ್ಲಾ ಜನ ಸಾಮಾನ್ಯರಿಗೂ ಹಲವು ಕಾರ್ಯಕ್ರಮ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ವಿಕಲಚೇತನರು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಎಲ್ಲರಂತೆ ಬದುಕು ನಡೆಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ತಿಪ್ಪಣ್ಣ ಸಿರಸಗಿ, ಮಾತನಾಡಿ ವಿಕಲತೆ ಶಾಪವಲ್ಲ. ಆದರೆ ಅದನ್ನು ಮೆಟ್ಟಿ ನಿಲ್ಲುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಳ್ಳುವಂತಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಬೇಕು ಎಂದರು. ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆಯಿಂದ ವಿಕಲಚೇತನರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಸದ್ಯ 25 ಜನರಿಗೆ ರೈನ್‍ಕೋಟ್ ವಿತರಿಸಲಾಗಿದೆ ಎಂದರು. ಸರ್ಕಾರದ ಸಹಕಾರದಲ್ಲಿ ರೆಡ್‍ಕ್ರಾಸ್ ಭವನ ನಿರ್ಮಿಸಲಾಗಿದ್ದು, ಕಟ್ಟಡದ ಮೇಲ್ಬಾಗದಲ್ಲಿ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಸಂಸದರಲ್ಲಿ ಇದೇ ಸಂದರ್ಭದಲ್ಲಿ ಕೋರಿದರು. ಜಿಲ್ಲಾ ವಿಕಲಚೇತನರ ಅಧಿಕಾರಿ ವಿಮಲ ಅವರು ಮಾತನಾಡಿ ಜಿಲ್ಲೆಯಲ್ಲಿನ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಮಳೆ ಇರುವ ಕಾರಣ ಆಯಾಯ ತಾಲ್ಲೂಕು ಮಟ್ಟದಲ್ಲಿ ಸಾಧನ ಸಲಕರಣೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ವಿಕಲಚೇತನರ ಸಂಘಧ ಅಧ್ಯಕ್ಷರಾದ ಮಹೇಶ್ವರ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ನಿರೂಪಣಾ ಅಧಿಕಾರಿ ಪ್ರಸನ್ನ ಕುಮಾರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಅಂಕಾಚಾರಿ, ರೆಡ್‍ಕ್ರಾಸ್ ಸಂಸ್ಥೆಯ ಸಹ ಕಾರ್ಯದರ್ಶಿ ಮಧುಕರ್, ನಿರ್ದೇಶಕರಾದ ತೆನ್ನಿರ ಮೈನಾ, ಕೆ.ಎಂ.ವೆಂಕಟೇಶ್, ಸತೀಶ್ ಹಾಗೂ ವಸಂತ್ ಇದ್ದರು. 

Share. Facebook Twitter Pinterest LinkedIn Tumblr Email WhatsApp
Previous Article*ಜು.12 ಮತ್ತು 13 ರಂದು 5ನೇ ವರ್ಷದ ಹಿಂದೂ ಕಪ್ ಮುಕ್ತ ಕೆಸರುಗದ್ದೆ ಕ್ರೀಡಾಕೂಟ*
Next Article *ಸೋಮವಾರಪೇಟೆ : ಕ್ರಿಯೇಟಿವ್ ಅಕಾಡೆಮಿ ವಿದ್ಯಾಸಂಸ್ಥೆಗೆ ಸಂಸದ ಯದುವೀರ್ ಭೇಟಿ : ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ*

Recommended: Website design development company services in Mangalore Forex Trading Teacher in India

Related Posts

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

ಸಿಯಾಟಲ್ (ಅಮೆರಿಕಾ): ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಸಾವಿನ…

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026

*ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ : ಗುತ್ತಿಗೆದಾರರ ಸಂಘ ಗಂಭೀರ ಆರೋಪ*

February 12, 2026

*ಕೇಂದ್ರ ಸರಕಾರದ ವಿರುದ್ಧ ಮಡಿಕೇರಿಯಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ*

February 12, 2026

*ಮಾಂದಲ್ ಪಟ್ಟಿ; ಸಾರ್ವಜನಿಕರು ಮತ್ತು ಪ್ರವಾಸಿಗರ ಗಮನಕ್ಕೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.