
ಮಡಿಕೇರಿ ಜು.11 NEWS DESK : ಭಾರತ ಸರ್ಕಾರದ ಕೇಂದ್ರೀಯ ರೇಷ್ಮೆ ಮಂಡಳಿಗೆ 2024-25ನೇ ಸಾಲಿನ ನೇಮಕಾತಿ ಅಧಿಸೂಚನೆಗನ್ವಯ ಮಗ್ಗುಲ ಗ್ರಾಮದ ಕೆ.ಬಿ.ಭರತ್ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ರೇಷ್ಮೆ ಕೃಷಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕಗಳನ್ನು ಪಡೆದು, ಆಂಧ್ರ ಪ್ರದೇಶದ ರಾಜ ಮಂಡ್ರಿಯ ಐ ಟಿ ಸಿ ಲಿಮಿಟೆಡ್ ಅಗ್ರಿ ಬಿಸಿನೆಸ್ ಡಿವಿಷನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭರತ್ ಮಗ್ಗುಲ ಗ್ರಾಮದ ದಿ. ಕುಪ್ಪಚ್ಚಿರ ಭೀಮಯ್ಯ ಮತ್ತು ಕವಿತಾ ದಂಪತಿಯ ಪುತ್ರ.









