
ಮಡಿಕೇರಿ ಜು.11 NEWS DESK : ಸೋಮವಾರಪೇಟೆ ತಾಲ್ಲೂಕು ಹೋಂಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ನ ತ್ರೈಮಾಸಿಕ ಸಭೆಯು ದಿ ಬ್ಲಾಸಂ ಕೂರ್ಗ್ ರೆಸಾರ್ಟ್ ಕೋರ್ ಕೊಲ್ಲಿಯಲ್ಲಿ ನಡೆಯಿತು. ಸಿ.ಕೆ.ರೋಹಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನ ಪ್ರವಾಸೋದ್ಯಮ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಚರ್ಚಿಸಲಾಯಿತು. ಪ್ರವಾಸೋದ್ಯಮದವರಿಗೆ ಅನುಕೂಲವಾಗುವಂತಹ ಪ್ರವಾಸೋದ್ಯಮ ಸ್ಥಳಗಳ ಮಾರ್ಗಸೂಚಿ ಫಲಕಗಳು ಅಳವಡಿಸುವುದು, ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತು ಸಂಘದ ವತಿಯಿಂದ ಕಾರೆಕೊಪ್ಪ ಜಂಕ್ಷನ್ ಬಳಿ ಬಸ್ ತಂಗುದಾಣನ್ನು ನಿರ್ಮಿಸುವಂತಹ ಕೆಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ರಾಗಿಣಿ ಅವರು ಯೋಗದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಅಲ್ಲದೆ ಸೋಮವಾರಪೇಟೆ ತಾಲೂಕಿನಲ್ಲಿ ನೂತನವಾಗಿ ಆರ್ಟ್ ಆಫ್ ಲಿವಿಂಗ್ ಕೇಂದ್ರ ತೆರೆದಿರುವ ಬಗ್ಗೆ ಮತ್ತು ಯೋಗ ಶಿಬಿರವನ್ನು ಸದುಉಪಯೋಗ ಪಡೆಸಿಕೊಳ್ಳುವಂತೆ ತಿಳಿಸಿದರು. ಸಭೆಯಲ್ಲಿ ದಿ ಬ್ಲಾಸಂ ಕೂರ್ಗ್ ರೆಸಾರ್ಟ್ ಮಾಲೀಕರಾದ ಓಂ ಪ್ರಕಾಶ್ ಚೌದ್ರಿ, ರೇಖಾ ಚೌದ್ರಿ ಮತ್ತು ಹೋಂ ಸ್ಟೇಷನ್ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದ್ ಎಸ್ ಎಲ್ ಉಪಸ್ಥಿತರಿದ್ದರು.








