
ವಿರಾಜಪೇಟೆ ಜು.16 NEWS DESK : ಕೊಡಗಿನಲ್ಲಿ ಕಕ್ಕಡ(ಆಟಿ)ಮಾಸ ಪ್ರಾರಂಭವಾಗಿದ್ದು, ಇದರ ಅಂಗವಾಗಿ ಕೆದಮುಳ್ಳೂರು ಮಹಾದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರ ಪರವಾಗಿ ದೇವಾಲಯದ ವತಿಯಿಂದ(ಕಕ್ಕಡ ತೆಂಗೆ) ಹಣ್ಣು ಕಾಯಿ ಸಮರ್ಪಿಸಲಾಯಿತು. ಬಳಿಕ ಮಹಾದೇವರ ಆಶೀರ್ವಾದ ಗ್ರಾಮದವರಿಗೆ ಸದಾ ಇರಲಿ ಎಂದು ಪ್ರಾರ್ಥಿಸಲಾಯಿತು. ಅರ್ಚಕರಾದ ರಾಧಕೃಷ್ಣ ಅವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.









