
ಮಡಿಕೇರಿ ಜು.25 NEWS DESK : 2025 -26ನೇ ಸಾಲಿನ ದಸರ ದಶಮಂಟಪ ಸಮಿತಿಯ ಮೊದಲ ಸಭೆಯು ಕೋಟೆಮಹಾಗಣಪತಿ ದೇವಾಲಯದ ಸಮಿತಿಯ ನೇತೃತ್ವದಲ್ಲಿ ಮಡಿಕೇರಿಯ ರಾಜ್ ದರ್ಶನ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನ ದೀಪ ಬೆಳಗುವ ಮೂಲಕ ಗಣ್ಯ ಅಥಿಗಳು ಉದ್ಘಾಟಿಸಿದರು. ಸಭೆಯಲ್ಲಿ ಕರಗೋತ್ಸವ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಣೆಯ ಕುರಿತು ಚರ್ಚೆ ನಡೆದಿದ್ದು, ಇದರಲ್ಲಿ ರಸ್ತೆಗಳ ಅಭಿವೃದ್ಧಿ, ಲೈಟಿಂಗ್ ವ್ಯವಸ್ಥೆ, ಸಮಯಕ್ಕೆ ಸರಿಯಾಗಿ ಬಹುಮಾನ ವಿತರಣೆ, ಕರಗಳ ಮುಂದೆ ಕುಣಿವುದನ್ನ ತಡೆಯಬೇಕು, ಬಹುಮಾನ ತೀರ್ಪನ್ನು
ಗೌಪ್ಯವಾಗಿಟ್ಟು ಪ್ರಕಟಿಸಬೇಕು, ಕರಗ ಕಟ್ಟುವ ಸ್ಥಳದ ಶುದ್ಧತೆಯನ್ನ ಕಾಪಾಡುವ ನಿಟ್ಟಿನಲ್ಲಿ ದಶಮಂಟಪ ಸಮಿತಿ ಎಚ್ಚರ ವಹಿಸಬೇಕು. ಕರಗಗೋತ್ಸವ ಆರಂಭವಾದ ದಿನದಿಂದ ದಸರಾ ಕೊನೆಯ ದಿನದವರೆಗೆ ಲೈಟಿಂಗ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು, ಹೆಚ್ಚು ಅನುದಾನತರುವಲ್ಲಿ ಸಮಿತಿ ಪ್ರಮುಖ್ಯತೆ ವಹಿಸಬೇಕು ಸೇರಿದಂತೆ ಹಲವು ಬದಲಾವಣೆಗಳ ಕುರಿತು ಚರ್ಚೆ ನಡೆಸಲಾಯಿತು. ಕೋಟೆ ಮಹಾಗಣಪತಿ ದೇವಾಲಯದ ಗೌರವ ಅಧ್ಯಕ್ಷರಾದ ಬಿ.ಎಂ.ರಾಜೇಶ್ ಮಾತನಾಡಿ, ಈ ಬಾರಿ ದಸರಾವನ್ನ ಬಹಳ ಅಚ್ಚುಕಟ್ಟಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ದಶಮಂಟಪ ಸಮಿತಿ ಉತ್ತಮವಾಗಿ ಮಾಡಬೇಕು. ಮೊದಲ ಬಾರಿಗೆ ದಶಮಂಪಗಳ ಬೈಲಾವನ್ನು ತಯಾರಿಸಲು ಸಮಿತಿ ಮಾಡುವ ಮೂಲಕ ಕಾರ್ಯ ನಿರ್ವಹಿಸುವ ಎಂದು ತಿಳಿಸಿದರು. ಸಭೆಯಲ್ಲಿ ಪ್ರಮುಖರಾದ, ಹರೀಶ್ ಅಶ್ವೇಕರ್, ಮಹೇಶ್ ಜೈನಿ, ಚುಮ್ಮಿ ದೇವಯ್ಯ, ಜಿ.ಜಿ ಜಗದೀಶ್, ಸತೀಶ್ ಸೇಟ್, ರಘುನಾಥ್ ಸೇಟ್, ರಾಜೇಶ್, ಲೋಕೇಶ್,ಪ್ರಕಾಶ್ ಆಚಾರ್, ಚಂದ್ರು, ವಿಘ್ನೇಶ್, ಆರ್.ಬಿ ರವಿ ಕರಗ ಪದಾಧಿಕಾರಿಗಳು, ದಶಮಂಟಪ ಸಮಿತಿಯ ಪ್ರಮುಖರು ಹಾಜರಿದ್ದರು.









