
ಮಡಿಕೇರಿ ಜು.26 NEWS DESK : ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ಎಚ್. ವಿ.ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರವು ಕೊಡಗು ಜಿಲ್ಲೆಯ ಮಾಲ್ದಾರೆ ಗ್ರಾಮದ ಪಿ.ಎ.ಮಂಜಪ್ಪ (ಮಂಜು ಕೊಡಗು) ಅವರಿಗೆ ಲಭಿಸಿದೆ. ಐತಪ್ಪ ಮತ್ತು ಲೀಲಾ ಅವರ ಪುತ್ರರಾದ ಇವರು 1994-95ರಲ್ಲಿ ನೀನಾಸಂನ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದರು. ಬಳಿಕ, ನೀನಾಸಂ ತಿರುಗಾಟದಲ್ಲಿ 2 ವರ್ಷ ನಟರಾಗಿ, ತಂತ್ರಜ್ಞರಾಗಿ ಕೆಲಸ ಮಾಡಿದರು. ಬೆಂಗಳೂರಿನ ಸಮುದಾಯ ತಂಡದಲ್ಲಿ, ಚಿತ್ರದುರ್ಗದ ಕಲಾಶಾಲೆ ಜಮುರಾ ಕಲಾವೇದಿಕೆಯಲ್ಲಿ ಅಧ್ಯಾಪಕರಾಗಿಯೂ ಕೆಲಸ ಮಾಡಿದ್ದ ಇವರು ಏಕಲವ್ಯ, ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇನ್ನೂ ಮೊದಲಾದ ಸ್ವಯಂಸೇವಾ ಸಂಸ್ಥೆಗಳಲ್ಲಿ ಸುಮಾರು 5 ವರ್ಷಗಳ ಕಾಲ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. 2002ರಿಂದ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜು ಕೊಡಗು
ವಿನ್ಯಾಸಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ‘ಆಹಾರ್ಯ-ಅಭಿನಯ’ ಪುಸ್ತಕವು ಹಂಪಿ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡು ಅಲ್ಲಿನ ಮತ್ತು ಇತರ ರಂಗಶಿಕ್ಷಣ ಕೇಂದ್ರಗಳಿಗೆ ಪಠ್ಯವಾಗಿರುವುದು ವಿಶೇಷ. ಒಟ್ಟು 37 ನಾಟಕಗಳನ್ನು ಅವರು ಈವರೆಗೆ ನಿರ್ದೇಶಿಸಿದ್ದಾರೆ.









