
ಮಡಿಕೇರಿ ಆ.21 NEWS DESK : ಜಮ್ಮಾ ಬಾಣೆ ವಿಧೇಯಕವನ್ನು ಪರಿಶೀಲಿಸಲು “ವಿಧಾನಸಭೆಯ ಆಯ್ಕೆ ಸಮಿತಿ” ರಚಿಸಿಸುವಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಮನವಿ ಮಾಡಿದರು. ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿಧೇಯಕವನ್ನು ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಸದನದಲ್ಲಿ ಮಂಡಿಸಿದರು. ಈ ವಿಧೇಯಕ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಸ್ಪಷ್ಟನೆ ನೀಡಿ, ಈ ವಿಧೇಯಕ ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬಂಧಸಿದ್ದಾಗಿದೆ. 1964ನೇ ಕರ್ನಾಟಕ ಕಂದಾಯ ಕಾನೂನಿನಲ್ಲಿ ಕೆಲವು ಅಂಶಗಳು ಕೊಡಗು ಜನರ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಜಟೀಲವಾದ ಸಮಸ್ಯೆಯಾಗಿರುವುದರಿಂದ ಇದನ್ನು ತಿದ್ದುಪಡಿ ಮಾಡಲು ಅವಶ್ಯಕವಾಗಿರುತ್ತದೆ. ಆದುದರಿಂದ ವಿಧಾನಸಭೆಯ ಆಯ್ಕೆ ಸಮಿತಿ (Select Committee) ರಚನೆ ಮಾಡಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ವಿಧಾನಸಭೆಯಲ್ಲಿ ವಿನಂತಿಸಿದರು. ಈ ಬಗ್ಗೆ ವಿಧಾನಸಭೆಯಲ್ಲಿ “ವಿಧಾನಸಭೆ ಆಯ್ಕೆ ಸಮಿತಿ” (Select Committee) ರಚನೆ ಮಾಡಲು ಒಪ್ಪಿಗೆ ನೀಡಲಾಯಿತು.









