
ನಾಪೋಕ್ಲು ಆ.22 NEWS DESK : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಬಿ.ಯು.ಪೂವಣ್ಣ ಮೂರು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ. ಕಕ್ಕಬೆಯ ಪಾಣಿ ಕುತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು. ಸಮಿತಿಯ ಸದಸ್ಯರುಗಳಾದ ಕುಶ ಭಟ್, ಕೆ.ಸಿ.ರಮೇಶ್, ಸಿ.ಡಿ.ಉಷಾ, ಕೆ.ಸಿ.ನೈಲ್, ಪಿ.ಎಂ.ನರೇಂದ್ರ, ಎ. ಜಗದೀಶ್, ಭೀಮಯ್ಯ, ಉಲ್ಲಾಸ್ ಆರ್. ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ಪಿ.ಟಿ.ತಮ್ಮಯ್ಯ ಹಾಗೂ ಶ್ರೀಕಾಂತ್ ಸಭೆಯಲ್ಲಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ






































