Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಳೆಯಿಂದ ಮನೆ ನೆಲಸಮ : ಪುನರ್ ವಸತಿ ಕಲ್ಪಿಸಲು ಮನವಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಳೆಯಿಂದ ಮನೆ ನೆಲಸಮ : ಪುನರ್ ವಸತಿ ಕಲ್ಪಿಸಲು ಮನವಿ

ಆಗಷ್ಟ್ 23, 20251 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಆ.23 NEWS DESK : ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಹಾಲೇರಿ ಗ್ರಾಮದಲ್ಲಿ ಪ್ರಸ್ತುತ ವರ್ಷದ ಆಗಸ್ಟ್ ತಿಂಗಳ ಮಳೆಯಿಂದ ಮನೆ ನೆಲಸಮವಾಗಿದ್ದು, ಪುನರ್ ವಸತಿ ಕಲ್ಪಿಸುವಂತೆ ಕೋರಿ ಸ್ಥಳೀಯ ನಿವಾಸಿ ವಿಶಾಲಾಕ್ಷಿ ಬಿ.ಜೆ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ 36 ವರ್ಷಗಳಿಂದ ಹಾಲೇರಿ ತಾತಿಬಾಣೆಯಲ್ಲಿ ವಾಸವಿದ್ದ ಮನೆ 2018 ರ ಪ್ರಾಕೃತಿಕ ವಿಕೋಪದ ಸಂದರ್ಭ ಸಂಪೂರ್ಣ ಬಿರುಕು ಬಿಟ್ಟಿತ್ತು. ಈ ಮನೆ ವಾಸಕ್ಕೆ ಯೋಗ್ಯವಾಗಿರುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆ ಮಡಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ನಂತರ ಪುನರ್ ವಸತಿ ಕಲ್ಪಿಸುವಂತೆ ಕೋರಿ 2018 ರಿಂದ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿರಲಿಲ್ಲ. ಜಂಬೂರುಬಾಣೆಯಲ್ಲಿ 2ನೇ ಮನೆ ಹಂಚಿಕೆ ಪಟ್ಟಿಯಲ್ಲಿ ನನ್ನ ಪತಿ ಬಿ.ಪಿ.ಜನಾರ್ಧನ ಅವರ ಹೆಸರಿನಲ್ಲಿ ಮನೆ ನೋಂದಾವಣಿಗೊಂಡಿತ್ತು ಮತ್ತು ಮನೆ ಸಂಖ್ಯೆಯನ್ನು ಕೂಡ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ನಮಗೆ ಮನೆ ದೊರೆತ್ತಿರುವುದಿಲ್ಲ ಎಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ. ನಾಲ್ವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡಲಾಗಿದೆ, ನಾನು ಹಾಗೂ ಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಡವರಾದ ನಮಗೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಕೆಲವೇ ದಿನಗಳ ಹಿಂದೆ ಹಾಲೇರಿ ಪೈಸಾರಿಯ ಹಳೆಯ ಮನೆ ಮಳೆಯಿಂದ ನೆಲಸಮಗೊಂಡ ಕಾರಣ ನಮಗೆ ಆಶ್ರಯ ಇಲ್ಲದಾಗಿದೆ. ಸುಂಟಿಕೊಪ್ಪ ಕಂದಾಯ ಪರಿವೀಕ್ಷಕರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ 7 ವರ್ಷಗಳಿಂದ ಸರಕಾರದ ಮನೆಗಾಗಿ ಪ್ರಯತ್ನ ಪಡುತ್ತಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ಕಂದಾಯ ಅಧಿಕಾರಿಗಳು ನೆಲಸಮಗೊಂಡಿರುವ ನಮ್ಮ ಮನೆಯನ್ನು ಖುದ್ದು ಪರಿಶೀಲಿಸಬೇಕು. ನಾನು ನೀಡಿರುವ ದಾಖಲೆಗಳನ್ನು ಪರಿಗಣಿಸಿ ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಬಾಣೆಯಲ್ಲಿ ಸರಕಾರ ನಿರ್ಮಿಸಿರುವ ಪುನರ್ವಸತಿಯಲ್ಲಿ ನಮಗೂ ಒಂದು ಮನೆ ನೀಡಬೇಕೆಂದು ವಿಶಾಲಾಕ್ಷಿ ಬಿ.ಜೆ ಅವರು ಜಿಲ್ಲಾಧಿಕಾರಿಗಳಲ್ಲಿ ಕೋರಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ನ.11ರಂದು ಕಡಂಗದಲ್ಲಿ ಸಿಎನ್‌ಸಿಯಿಂದ 9ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ನವೆಂಬರ್ 7, 2026

ನ.11ರಿಂದ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.15ರಿಂದ 20ರಷ್ಟು ಹೆಚ್ಚಳ

ನವೆಂಬರ್ 7, 2026

ನ.8ರಂದು ನಾಪೋಕ್ಲು ಕೊಡವ ಸಮಾಜದ 26ನೇ ವಾರ್ಷಿಕ ಮಹಾಸಭೆ

ನವೆಂಬರ್ 7, 2026

ನ.11ರಿಂದ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಶೇ.15ರಿಂದ 20ರಷ್ಟು ಹೆಚ್ಚಳ

ನವೆಂಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.7: ಇಂಧನ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಖಾಸಗಿ…

ನ.8ರಂದು ನಾಪೋಕ್ಲು ಕೊಡವ ಸಮಾಜದ 26ನೇ ವಾರ್ಷಿಕ ಮಹಾಸಭೆ

ನವೆಂಬರ್ 7, 2026

ನ.14ರಿಂದ ಶ್ರೀ ಕ್ಷೇತ್ರ ಕಬ್ಬಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವ

ನವೆಂಬರ್ 7, 2026

ರಸ್ತೆ ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 7, 2026

ಸುಂಟಿಕೊಪ್ಪಕ್ಕೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ: ಪಿ.ಎಫ್. ಸೆಬಾಸ್ಟಿನ್

ನವೆಂಬರ್ 7, 2026

ಸೋಮವಾರಪೇಟೆ ಮಾಸ್ಟರ್ ಪ್ಲಾನ್ ರಚನೆಗೆ ಸಾರ್ವಜನಿಕರಿಂದ ಸಲಹೆ ಆಹ್ವಾನ

ನವೆಂಬರ್ 7, 2026

ನಾಂಗಾಲ ಗ್ರಾಮದಲ್ಲಿ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಭೂಮಿಪೂಜೆ

ನವೆಂಬರ್ 7, 2026

ಕುಶಾಲನಗರದಲ್ಲಿ ಕರ್ಕಶ ಡಿಜೆ ಸೌಂಡ್: ಮೂರು ಪ್ರವಾಸಿ ಬಸ್‌ಗಳಿಗೆ ದಂಡ

ನವೆಂಬರ್ 7, 2026

ಕ.ಸಾ.ಪ.ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ; ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅನನ್ಯ: ಬಿ.ಬಿ.ಹೇಮಲತಾ ಬಣ್ಣನೆ

ನವೆಂಬರ್ 7, 2026

ಕೃಷಿ ಪದ್ಧತಿಗೆ ವಿರುದ್ಧವಾಗಿ ಕಟ್ಟಡಗಳ ನಿರ್ಮಾಣ: ಕೊಡಗಿನ ಭೌಗೋಳಿಕ ಚಿತ್ರಣವೇ ಬದಲು; ಕೃಷಿ ಭೂಮಿಗಳ ಮಾರಾಟದಿಂದ ಪರಿಸರಕ್ಕೆ ಧಕ್ಕೆ: ಅಮ್ಮತ್ತಿ ರೈತ ಸಂಘ ಆತಂಕ

ನವೆಂಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.