
ಸುಂಟಿಕೊಪ್ಪ ಆ.23 NEWS DESK : ಸುಂಟಿಕೊಪ್ಪ ಶ್ರೀ ರಾಮ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷರು ಹಾಗೂ ಕೆಳಗಿನ ಪನ್ಯ ತೋಟದ ಮಾಲೀಕರಾದ ಎಸ್.ಬಿ.ಶಂಕರ್ ಅವರ ಪುತ್ರ ಎಸ್.ಎಸ್.ಸಂದೇಶ್ (58) ಅವರು ಮೈಸೂರಿನಲ್ಲಿ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಸ್ವಗೃಹ ಪನ್ಯದಲ್ಲಿ ನಡೆಯಿತು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.





































