
ಮಡಿಕೇರಿ ಆ.28 NEWS DESK : ಹಿರಿಯ ರಾಜಕರಣಿ ದಿ.ಎ.ಕೆ.ಸುಬ್ಬಯ್ಯ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು, ತಮ್ಮ ತಂದೆಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯವರ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸಿ, ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭ ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಎಸ್.ಕಾರ್ಯಪ್ಪ ದಂಪತಿಗಳು, ಶಾಸಕರ ತಾಯಿಯ ಹಿರಿಯ ಸಹೋದರಿ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರುಗಳು, ಶಾಸಕರ ಆಪ್ತರು, ಪಕ್ಷದ ಪ್ರಮುಖರು ಹಾಗು ಇತರರು ಉಪಸ್ಥಿತರಿದ್ದರು.








