
ನಾಪೋಕ್ಲು ಆ.29 NEWS DESK : ಚೆನ್ನೈನಲ್ಲಿ ನಡೆದ ಬ್ರೈನೋಬ್ರೈನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಡ್ಲೇರ ಲಿಖಿತ್ ಸೋಮಣ್ಣ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿದ್ದಾನೆ. ಬ್ರೈನೋಬ್ರೈನ್ ನಲ್ಲಿ ಒಟ್ಟು ಹತ್ತು ಹಂತಗಳಿದ್ದು, ಎಂಟು ಹಂತಗಳಲ್ಲಿ ಭಾಗವಹಿಸಿ, ರಾಜ್ಯಮಟ್ಟದಲ್ಲಿ 3 ಬಾರಿ, ರಾಷ್ಟ್ರಮಟ್ಟದಲ್ಲಿ 2 ಬಾರಿ ಅಂತಾರಾಷ್ಟ್ರಮಟ್ಟದಲ್ಲಿ 2 ಬಾರಿ ಭಾಗವಹಿಸಿ 4 ಚಾಂಪಿಯನ್ ಟ್ರೋಫಿ, ಮೂರು ಚಿನ್ನದ ಪದಕ ಪಡೆದುಕೊಂಡಿರುವ ಲಿಖಿತ್ ಸೋಮಣ್ಣ ಬ್ರೈನೋಬ್ರೈನ್ ಸ್ಪರ್ಧೆಗಳಲ್ಲಿ ಭಾಗವಹಿಸಿ 25 ರಿಂದ 40 ಸಮಸ್ಯೆಗಳನ್ನು ಆಫ್ ಲೈನ್ ನಲ್ಲಿ ಮೂರು ನಿಮಿಷ ಹಾಗೂ ಆನ್ಲೈನ್ ನಲ್ಲಿ ನಾಲ್ಕು ನಿಮಿಷಗಳಲ್ಲಿ ಮುಗಿಸುವ ನೈಪುಣ್ಯತೆ ಹೊಂದಿದ್ದಾನೆ. ಲಿಖಿತ್ ಸೋಮಣ್ಣ ಬೆಟ್ಟಗೇರಿ ಗ್ರಾಮದ ಕಡ್ಲೇರ ಲೋಕೇಶ್ ಕುಮಾರ್ ಮತ್ತು ವೃಂದಾ ದಂಪತಿಯ ಪುತ್ರ. ಕೊಟ್ಟೂರು ಚೇರಂಬಾಣಿ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ. ಇವನು ಮಡಿಕೇರಿಯ ಮಾಪಂಗಡ ಕವಿತಾ ಕರುಂಬಯ್ಯ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ವರದಿ : ದುಗ್ಗಳ ಸದಾನಂದ.








