
ಮಡಿಕೇರಿ ಆ.29 NEWS DESK : ಭಾರತ್ ಕೆರಿಯರ್ ನೆಕ್ಟ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಅಪೋಲೊ ಮೆಡ್ ಸ್ಕಿಲ್ಸ್ ಸಂಸ್ಥೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 6 ತಿಂಗಳ ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ) ತರಬೇತಿ ಬೆಂಗಳೂರಿನಲ್ಲಿ ನೀಡಲಾಗುತ್ತಿದೆ. 18-30 ವರ್ಷ ವಯಸ್ಸಿನ ಕನಿಷ್ಠ 10 ನೇ ತರಗತಿ ಉತ್ತೀರ್ಣರು ಅರ್ಹರಾಗಿದ್ದು ಆಸ್ಪತ್ರೆ ಹಾಗೂ ಆರೈಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸ ಒಳಗೊಂಡ ತರಬೇತಿಯ ಬಳಿಕ ಖಾಸಗಿ ಆಸ್ಪತ್ರೆ ವೃದ್ದಾಶ್ರಮ ಹಾಗೂ ಹಿರಿಯರ ಆರೈಕೆ ಕೇಂದ್ರಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9535602888/ 6362902311/ 6332902335 ಸಂಪರ್ಕಿಸಬಹುದು ಎಂದು ಸಿ.ಇ.ಒ ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಶನ್ಸ್ ಎಲ್.ಎಲ್.ಪಿ. ವಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.








