
ಮಡಿಕೇರಿ ಆ.29 NEWS DESK : ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳ ರಾಜ್ಯ ವಯನಾಡು ಜಿಲ್ಲೆಗೆ ಸಂಪರ್ಕಿಸುವ ರಸ್ತೆಯ ತಮರಶೆರಿ ಘಾಟ್ ಬಳಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿರುತ್ತದೆ. ಈ ಸಂಬಂಧ ಕೊಡಗು ಜಿಲ್ಲೆಯ ಗಡಿಭಾಗವಾದ ಕುಟ್ಟ ಮೂಲಕ ವಯನಾಡು ಜಿಲ್ಲೆಗೆ ಗುಡಲೂರು ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಬದಲೀ ಮಾರ್ಗವಾದ ಗೋಣಿಕೊಪ್ಪ -ಕೂಟುಪುಳ ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲು ಉಲ್ಲೇಖದ ಪತ್ರದಲ್ಲಿ ಕೇರಳ ವಯನಾಡು ಜಿಲ್ಲಾಧಿಕಾರಿಗಳು ಕೋರಿರುತ್ತಾರೆ. ಆದ್ದರಿಂದ, ಗುಡಲೂರು ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗುವ ವರೆಗೆ ಜಿಲ್ಲೆಯ ಕುಟ್ಟ ಮೂಲಕ ತಮರಶೆರಿ ಘಾಟ್, ಗುಡಲೂರು ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಬದಲೀ ಮಾರ್ಗವನ್ನು ಬಳಸಲು ಸಲಹೆ ನೀಡಿದೆ. ಸಾರ್ವಜನಿಕರು ಬದಲೀ ಮಾರ್ಗವಾದ ಮಾಕುಟ್ಟ ಮುಖಾಂತರ ಕೇರಳ ರಾಜ್ಯಕ್ಕೆ ತೆರಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ತಿಳಿಸಿದ್ದಾರೆ.









