
ಮಡಿಕೇರಿ ಆ.30 NEWS DESK : ಕೂಡಿಗೆ ಸರಕಾರಿ ಕ್ರೀಡಾ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಯಿತು. ಹಾಕಿ ಮಾಂತ್ರಿಕಧ್ಯಾನ್ ಚಂದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿದ ಶಾಲೆಯ ಕ್ರೀಡಾಪಟುಗಳಾದ ಚಪ್ಪುಡಿರ ನಾಚಪ್ಪ, ಪ್ರತೀಕ್ ಯರಕಲ್, ಖುಷಿ, ಅರ್ಚನಾ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದಿನದ ಮಹತ್ವದ ಬಗ್ಗೆ ಶಾಲೆಯ ಹಾಕಿ ತರಬೇತಿದಾರರಾದ ವೆಂಕಟೇಶ್ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಮುರುಳಿ ಮಾತಾನಾಡಿ ಕ್ರೀಡಾ ಪಟುಗಳು, ಹಿರಿಯ ಕ್ರೀಡಾಪಟುಗಳ ಮಾರ್ಗದರ್ಶನದಲ್ಲಿ ಸಾಗಿ ತಮ್ಮ ಪ್ರತಿಭೆಯ ಮುಖೇನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದು ಹೇಳಿದರು. ಈ ಸಂದರ್ಭ ಕ್ರೀಡಾ ತರಬೇತಿದಾರರಾದ ಸುರೇಶ್, ದಿನಾಮಣಿ, ಆಶ್ವಿತ, ಶಿಕ್ಷಕರಾದ ರಂಜಿನಿ, ಗೀತಾ, ಆಶಾ, ಸವಿತ, ಮೋಹನ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. ಕ್ರೀಡಾ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಕಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರ ನೇತೃತ್ವವನ್ನು ಪ್ರಥಮ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳಾದ ನಿಹಾಲ್ ಸಂತೋಷ್, ಮೋಕ್ಷಿತ್, ನಡೆಸಿಕೊಟ್ಟರು.









