
ಮಡಿಕೇರಿ ಆ.30 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳು ಕಾರ್ಯಪ್ಪ ಪ್ರತಿಮೆಗೆ ಪುಷ್ಪ ನಮನ ಹಾಗೂ ಯುವ ಸ್ಪಂದನವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮನ ತಾವು ತೋಡಗಿಸಿಕೊಳ್ಳಲು ಹಾಗೂ ಗುರುತಿಸಿಕೊಳ್ಳಲು ಒಂದು ಉತ್ತಮ ಅವಕಾಶ. ಇಲ್ಲಿ ಸೇವ ಮನೋಭಾವ ಮಾತ್ರವಲ್ಲ ಅದ ಆಚೆಗೂ ಸಾಕಷ್ಟು ಅವಕಾಶಗಳಿಗೆ ಇಂದು ಒಂದು ಉತ್ತಮ ವೇದಿಕೆಯಾಗಿದೆ. ನಾನು ಹೀಗೆ ಲೀಲಾ ಜಾಲಾವಾಗಿ ಮಾತನಾಡಲು ಅಡಿಪಾಯ ಹಾಕಿದ್ದೆ ಈ ಎನ್‌ಎಸ್‌ಎಸ್ ಬಹಳ ಅನುಭವ ಅವಕಾಶಗಳ ಜೊತೆಗೆ ಜೀವನದ ಅನುಭವವನ್ನ ಈ ಎನ್.ಎಸ್.ಎಸ್ ನೀಡುತ್ತೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಸಂಯಮ, ಜೊತೆಗೆ ಸಮಾಜದಲ್ಲಿ ಹೇಗೆ ಬೆರೆಯುತ್ತಾರೆಂಬದನ್ನ ಕಲಿಸಿಕೊಡುತ್ತೆ. ಹೆಚ್ಚಿನದಾಗಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಕಾನೂನು ನಿಯಮದ ಬಗ್ಗೆ ಅರಿವಿಕೆ ನೀಡುವಂತಾ ಬೀದಿ ನಾಟಕ ಸಾಮಾಜಿಕ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. ಎನ್.ಎಸ್.ಎಸ್ ವಿದ್ಯಾರ್ಥಿಗಳಿಗಳಿಗೆ ಸಮಾಜವನ್ನ ಬದಲಾಯಿಸುವ ಶಕ್ತಿ ಇದೆ ಅದನ್ನ ಮುಂದೆಯು ಮಾಡಬೇಕೆಂದು ಸಲಹೆ ನೀಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ಮೆ.ಬಿ ರಾಘವ ಮಾತನಾಡಿ, ಎನ್.ಎಸ್.ಎಸ್ ಒಂದು ಕಾರ್ಯಕ್ರಮವಲ್ಲ ಇದೊಂದು ವೇದಿಕೆ. ಹಲವು ಉತ್ತಮ ಸೇವೆಗೆ ಒಂದು ವೇದಿಕೆ, ರಾಷ್ಟ್ರೀಯ ಸೇವಾಯೋಜನೆ ನಿಂತ ನೀರಲ್ಲ ಹರಿಯಿವ ನೀರು ಸಾಕಷ್ಟು ಬದಲಾವಣೆ ಪರಿವರ್ತನೆಗೆ ಹಾದಿಯನ್ನ ನೀಡುತ್ತೆ. ಅಂತ ಶಕ್ತಿ ಎನ್.ಎಸ್.ಎಸ್ ಸ್ವಯಂ ಸೇವಕರಿಂದ ಸಾಧ್ಯ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ, ಶಿಸ್ತು, ನಾಯಕತ್ವ ಗುಣವನ್ನ ರೂಪಿಸುವ ಮೂಲಕ ಸಮಾಜದಲ್ಲಿ ಗಣ್ಯ ವ್ಯಕ್ತಿಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಜನ ಅಧಿಕಾರಿಗಳಾದ ಶೈಲಶ್ರೀ, ಅಲೋಕ್ ಕುಮಾರ್, ಕಾಲೇಜು ಪ್ರಧ್ಯಾಪಕರು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಜರಿದ್ದರು.









