
ನಾಪೋಕ್ಲು ಸೆ.1 NEWS DESK : ಪ್ರವಾದಿ ಮೊಹಮ್ಮದ್ (ಸ) ಅವರ 1500ನೇ ಜನ್ಮ ದಿನಾಚರಣೆ ಈದ್ ಮಿಲಾದ್ ಪ್ರಯುಕ್ತ ಎಸ್ ವೈ ಎಸ್ ಕೊಟ್ಟಮುಡಿ ವತಿಯಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ನಾಪೋಕ್ಲು-ಮಡಿಕೇರಿ ಮುಖ್ಯ ರಸ್ತೆ ಕೊಟ್ಟಮುಡಿಯಲ್ಲಿ ಎಸ್.ವೈ.ಎಸ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ರಸ್ತೆಯ ಬದಿಗಳಲ್ಲಿದ್ದ ಕಾಡು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಈ ಸಂದರ್ಭ ಕೊಟ್ಟಮುಡಿ ಎಸ್ ವೈ ಎಸ್ ಅಧ್ಯಕ್ಷ ಉಸೈನ್ ಝುಹರಿ, ಉಪಾಧ್ಯಕ್ಷ ಮೈಸಿ ಅಸ್ಕರ್ ಸಖಾಫಿ, ಸದಸ್ಯರಾದ ಉಸೈನ್ ಆಬಿದ್ ರಹೂಫ್ ಜಾಫರ್ ಬಷೀರ್ ರಫೀಕ್ ಜಕರಿಯ್ಯ ರಜಾಕ್ ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









