
ಮಡಿಕೇರಿ ಸೆ.2 NEWS DESK : ವಿರಾಜಪೇಟೆ ತಾಲ್ಲೂಕು ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಟ್ಟಳ್ಳಿ ಹಾಡಿ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಧ್ವನಿವರ್ಧಕವನ್ನು ಖರೀದಿಸಿ ಕೊಡುಗೆಯಾಗಿ ನೀಡಿದರು. ಶಾಸಕರ ಕೊಡುಗೆಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ ನಿವಾಸಿಗಳು, ಧನ್ಯವಾದಗಳು ಅರ್ಪಿಸುತ್ತಾ ಕಳೆದ ವರ್ಷವೂ ಶಾಸಕರು ತಮ್ಮ ಸ್ವಂತ ಹಣದಲ್ಲಿ ನೀಡಿದ ಕೊಡುಗೆಯ ಬಗ್ಗೆಯೂ ಸ್ಮರಿಸಿಕೊಂಡರು.






































