
ಮಡಿಕೇರಿ ಸೆ.2 NEWS DESK : ಭಾಗಮಂಡಲ ಶ್ರೀ ವಿನಾಯಕ ಟ್ರಸ್ಟ್ ಹಾಗೂ ಶ್ರೀ ಸದಾಶಿವ ಶಿವಣ್ಣನವರ್ ಮತ್ತು ಸ್ನೇಹಿತರ ಸಹ ಪ್ರಯೋಜಕತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಶೀರ್ಷಿಕೆಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡರು. ಪ್ರಥಮ ಬಹುಮಾನವನ್ನು ಅಟಲ್ ಬಿಹಾರಿ ವಾಜಿಪೇಯಿ ಶಾಲಾ ವಿದ್ಯಾರ್ಥಿಗಳು ಮೂಡಿಗೆರಿಸಿಕೊಂಡರು. ದ್ವಿತೀಯ ಬಹುಮಾನವನ್ನು ಶ್ರೀ ರಾಜ ರಾಜೇಶ್ವರಿ ಶಾಲೆ, ತೃತೀಯ ಬಹುಮಾನವನ್ನು ಶ್ರೀ ರಾಜ ರಾಜೇಶ್ವರಿ ಶಾಲೆ, ಚತುರ್ಥ ಬಹುಮಾನವನ್ನು ಕೋರಂಗಾಲ ಜ್ಞಾನೋದಯ ಶಾಲೆ ಪಡೆದುಕೊಂಡಿತು. ಉಳಿದಂತಹ 6 ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆ ಸಾಗಿ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಕಾರ್ಯಕ್ರಮಮಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಊರಿನ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.









