
ಮಡಿಕೇರಿ ಸೆ.5 NEWS DESK : ಅಮ್ಮತಿಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ತಂಡ ರನ್ನರ್ಸ್ ಟ್ರೋಫಿ ತಮ್ಮದಾಗಿಸಿಕೊಂಡಿದೆ. ತಂಡದ ವಿದ್ಯಾರ್ಥಿಗಳು ಅಮ್ಮಂಡ ಗಿಯಾನ ಎ, ಮೇವಂಡ ಯಾನಿ ಬೆಳ್ಳಿಯಪ್ಪ, ಕಂಜಿತಂಡ ಲಿವ್ಯ, ಪಾಲೇಯಂಡ ಶಾನ್ವಿ ಪೊನ್ನಮ್ಮ ಎಸ್, ನಡುಮನೆ ಮೋಕ್ಷಿತ ಎಸ್, ಮಾಲೇಟ್ಟಿರ ಚಾಲ್ಸಿ, ಹರ್ಷಿನಿ ವಿ.ಯಾದವ್, ದಿಯಾ ಫಾತಿಮಾ, ಫಾತಿಮತ್ ಶಿಫಾ, ನಮ್ಮೆರ ವನ್ಸಿಕ ಮುತ್ತಮ್ಮ ಕಾಲೆಂಗಡ ದೃಶ್ಯ ಕಾವೇರಮ್ಮ, ನಿಯತಿ ರಾಜ್ ಪುರೋಹಿತ್ ಭಾಗವಹಿಸಿದ್ದರು. ತಂಡಕ್ಕೆ ದೈಹಿಕ ಶಿಕ್ಷಕರುಗಳಾದ ಮೋನಿಕ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









