
ಮಡಿಕೇರಿ ಸೆ.5 NEWS DESK : ಕೊಡಗು ಪತ್ರಕರ್ತರ ಸಂಘ, ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಸೆ.12 ರಂದು ಪತ್ರಕರ್ತರು, ಪತ್ರಿಕಾ ವಿತರಕರು ಹಾಗೂ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ನಗರದ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 9 ಗಂಟೆಯಿಂದ ನಡೆಯಲಿರುವ ಶಿಬಿರವನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಇ ಎನ್ ಟಿ ತಜ್ಞರು, ಶ್ವಾಸಕೋಶ ತಜ್ಞರು, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಶ್ರವಣ ಆರೋಗ್ಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಸೇರಿದಂತೆ 15 ವಿಭಾಗಗಳ ನುರಿತ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಅಲ್ಲದೇ ಸರ್ಕಾರದ ಯೋಜನೆಗಳ ಬಗ್ಗೆ ಆಯುಷ್ಮಾನ್ ಭಾರತ್ ಯೋಜನಾಧಿಕಾರಿ ಪಾಲ್ಗೊಂಡು ಮಾಹಿತಿ ನೀಡಲಿದ್ದಾರೆ. ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ವಿತರಕರು ಹಾಗೂ ಕುಟುಂಬಸ್ಥರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೊಡಗು ಪತ್ರಕರ್ತರ ಸಂಘ, ಕ್ಷೇಮಾಭಿವೃದ್ಧಿ ಸಮಿತಿ ಮನವಿ ಮಾಡಿದೆ.








