
ಮಡಿಕೇರಿ ಸೆ.5 NEWS DESK : ಮಾನವ ಹಾಗೂ ವನ್ಯ ಜೀವಿ ಸಂಘರ್ಷ ನಿವಾರಣೆ ಕುರಿತು ಸೇವೆ ಸಲ್ಲಿಸುತ್ತಿರುವ ಹುಣಸೂರಿನ ರತ್ನ ಪುರಿಯ ಲಯಾನ ಟ್ರಸ್ಟ್ ವತಿಯಿಂದ ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಹಾವುಗಳ ಸಂರಕ್ಷಣಾ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಲಯಾನ ಟ್ರಸ್ಟ್ ನ ಶರಣ್ಯ ಭಟ್ ಹಾಗೂ ಸಮುದಾಯ ಕಲ್ಯಾಣ ಸಹಾಯಕ ಪ್ರಾಧ್ಯಾಪಕರಾದ ಶ್ರೇಯಸ್ ಜೈನ್ ಹಾವುಗಳ ದೇಹದ ರಚನೆ, ಹಾವುಗಳ ಬಗ್ಗೆ ಇರುವ ತಪ್ಪು ಭಾವನೆ, ಹಾವು ಕಡಿತಕ್ಕೆ ಒಳಗಾದವರಿಗೆ ಹೇಗೆ ನೆರವಾಗಬೇಕು ಸೇರಿದಂತೆ ಆಸಕ್ತಿದಾಯಕ ವಿಚಾರಗಳನ್ನು ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಇದ್ದ ಸಂದೇಹಗಳಿಗೆ ಉತ್ತರಗಳನ್ನು ನೀಡಿದರು. ಈ ಸಂದರ್ಭ ಕಾವೇರಿ ಶಾಲೆಯ ಅಧ್ಯಕ್ಷರಾದ ಬಿ.ಎಸ್.ಸುದೇಶ್ ವಂದನೆಗಳನ್ನು ಸಲ್ಲಿಸಿದರು.









