Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ : ಶಾಸಕ ಡಾ.ಮಂತರ್ ಗೌಡ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ : ಶಾಸಕ ಡಾ.ಮಂತರ್ ಗೌಡ

ಸೆಪ್ಟೆಂಬರ್ 5, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಸೆ.5 NEWS DESK : ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ.   ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗುರುಗಳಿಲ್ಲದಿದ್ದರೆ ಸಮಾಜದ ಸ್ಥಿತಿಗತಿಗಳು ಬೆರಡೆಯೇ ಸಾಗುತ್ತಿತ್ತು, ಗುರುವಿಂದಲೆ ಕೆಡಕುಗಳು ಮರೆಯಾಗಿ ಒಳಿತಾಗುತ್ತಿರುವುದು. ಆದುದರಿಂದಲೇ ಪ್ರತಿಯೊಬ್ಬರ ಜೀವನದಲ್ಲಿಯೂ ಗುರು ಮಹತ್ವ ಪೂರ್ಣವಾಗಿದ್ದಾರೆ ಎಂದು ಗುರುವಿನ ಮಹತ್ವ ವಿವರಿಸಿದರು.  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗಲು ಶಾಲೆಗಳಲ್ಲಿ ಅನೇಕ ಬದಲಾವಣೆ ಹಾಗೂ ನೂತನ ಕಾರ್ಯಕ್ರಮಗಳನ್ನು ತರಲಾಗುತ್ತಿದೆ ಎಂದರು. ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅದನ್ನು ಸರಿಪಡಿಸಿ ಕೊಡುವುದರ ಭರವಸೆಯನ್ನು ನೀಡಿದರು. ಶಿಕ್ಷಕರುಗಳು ಸಹ ಒಟ್ಟಾಗಿ ಹೋರಾಟ ನಡೆಸಬೇಕು. ತಮಗೆ ದೊರಕಬೇಕಾದ ಪ್ರತಿಯೊಂದು ಸವಲತ್ತು ಪಡೆದುಕೊಳ್ಳಬೇಕು ಹಾಗೆಯೇ ಪ್ರಾಮಾಣಿಕ ಪ್ರಯತ್ನ ನಡೆಸಿ ಬೋಧಿಸಿದ ಶಿಕ್ಷಕರುಗಳಿಗೆ ವಂದಿಸಿ, ಗೌರವಿಸಿದರು. ನಿವೃತ್ತರಾಗಿರುವ ಶಿಕ್ಷಕರಿಗೆ ಮತ್ತೆ ಪುನಹ ಅವಕಾಶ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಿವೃತ್ತಿ ಹೊಂದಿದವರು ಸಹ ಮತ್ತೆ ಪುನಹ ಅತಿಥಿ ಶಿಕ್ಷಕರಾಗಿ  ಬೋಧಿಸಲು ಇಚ್ಛಿಸಿದರೆ ಅವರುಗಳಿಗೆ ಅವಕಾಶ ಕಲ್ಪಿಸುವುದರ ಕುರಿತು  ಅಧಿಕಾರಿಗಳಿಗೆ ಸಲಹೆ ನೀಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮೈಸೂರಿನ ಉಪನ್ಯಾಸಕರಾದ ಎಸ್ ಪಿ ನಾಗರಾಜು ಅವರು ಮಾತನಾಡಿ “ಗುರುವಿಂದ ಬಂಧುಗಳು ಉಪಚರಿಸಬೇಕು, ದೈವಗಳು ಗುರುವಿಂದಲಾದುದು ಪುಣ್ಯ ಲೋಕಕ್ಕೆ, ಗುರುವಿಂದ ಮುಕ್ತಿ ಸರ್ವಜ್ಞ” ಮೊದಲು ಗುರುವಿನ ಉಪಚಾರವಾದ ನಂತರ ಬಂಧುಗಳನ್ನು ಉಪಚರಿಸಬೇಕು. ಮೊದಲು ಗುರುವನ್ನು ಪೂಜಿಸಿ ಗೌರವಿಸಬೇಕು, ನಂತರ ದೇವರನ್ನು ಪೂಜಿಸಬೇಕು, ಜೊತೆಗೆ ನಮಸ್ಕರಿಸಬೇಕು. ಏಕೆಂದರೆ ಗುರುವಿನಿಂದಲೇ ನಮಗೆ ಪುಣ್ಯ ಲೋಕವು ಪ್ರಾಪ್ತಿಯಾಗುವುದು ಮತ್ತು ಗುರುವಿನಿಂದಲೇ ನಮಗೆ ಮುಕ್ತಿಯು ದೊರೆಯುವುದು ಎಂದು ನುಡಿದರು. ಶಿಕ್ಷಕ, ಚಿಂತಕ, ಬರಹಗಾರ, ಭಾಷಣಕಾರ ಈ ರೀತಿಯಾಗಿ ತಯಾರು ಮಾಡಿದ ನನ್ನ ಶಿಕ್ಷಕರುಗಳಿಗೆ ವಂದಿಸಬೇಕಾದರೆ ನನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಬೇಕು. ಆಗಲೇ ನನ್ನ ಜನ್ಮಕ್ಕೊಂದು ಸಾರ್ಥಕ ಹಾಗೂ ಅರ್ಥ ಸಿಗುವುದು ಎಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಿಳಿಸಿದರು.  ಅಂತಹ ನಿಸ್ವಾರ್ಥ ಮನಸ್ಸಿನ ವ್ಯಕ್ತಿ ಎಂದರೆ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಾತ್ರವೇ ಎಂದರು. ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆಯದೆ ಶಿಕ್ಷಕರುಗಳು ಆನ್ಲೈನ್ ನಲ್ಲಿ ಹಾಗೂ ಗೂಗಲ್ ನಲ್ಲಿ ಮಾಹಿತಿ ಪಡೆದು ಬೋಧಿಸುತ್ತಿದ್ದರು. ಶಾಲೆಯಲ್ಲಿ ಪಾಠ ಮಾಡುವುದಕ್ಕೂ ಮೊಬೈಲ್ ನಲ್ಲಿ ಕುಳಿತು ಪಾಠ ಮಾಡುವುದಕ್ಕೂ ಹೆಚ್ಚಿನ ವ್ಯತ್ಯಾಸವಿದೆ. ಎಂದಿಗೂ ಸಹ ಕೋರೋನದಂತ ಸಮಯ ಮರುಕಳಿಸಬಾರದೆಂದು, ಕೊರೋನಾ ಸಮಯದಲ್ಲಿ ಶಿಕ್ಷಕರುಗಳಿಗೆ ಆದ ಕಷ್ಟವನ್ನು ಸ್ಮರಿಸಿದರು. :: ಪ್ರೈಮರಿ ಯಿಂದ ಸ್ನಾತಕೋತ್ತರವರೆಗೂ ಶಿಕ್ಷಕರ ಅವಶ್ಯಕತೆ ಇದೆ :: ಶಿಕ್ಷಕರು ಉರಿಯುವ ಮೇಣದ ಬತ್ತಿಯಂತೆ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವ ಮೇಣದಂತೆಯೇ ಶಿಕ್ಷಕರುಗಳು ಅಂತಹ ಮಹತ್ವ ಸ್ಥಾನ ಶಿಕ್ಷಕರುಗಳಿಗಿದೆ ಎಂದು ಅಭಿಪ್ರಾಯಪಟ್ಟರು. ಗಾಂಧೀಜಿ ನಂತರ ದೊಡ್ಡ ನಾಯಕನೆಂದರೆ ನೆಹರು ಅಂತಹ ನೆಹರು ರವರು  ರಾಧಾಕೃಷ್ಣನ್ ಅವರನ್ನು ಭಾಷಣಕ್ಕಾಗಿ ಕರೆದರೆಂದರೆ ಅವರಂತಹ ಭಾಷಣಕಾರರಾಗಿರಬಹುದು ಎಂದು ಸರ್ವಪಲ್ಲಿ ರಾಧಾಕೃಷ್ಣನ್ ರವರ ಮಹತ್ವವನ್ನು ಶಿಕ್ಷಕರುಗಳಿಗೆ ತಿಳಿಸಿದರು.”ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ” ಇದನ್ನು ಬಸವಣ್ಣ ತಿಳಿಸಿದರು. ಈ ರೀತಿಯಂತೆಯೇ ಶಿಕ್ಷಕರು ನಡೆಯಬೇಕು. ವಿದ್ಯಾರ್ಥಿಗಳನ್ನು ನಡೆಸಬೇಕು. ಅರಿವೇ ಗುರು ನನಗೊಬ್ಬ ಗುರು, ನಿನಗೊಬ್ಬ ಗುರು ಪ್ರತಿಯೊಬ್ಬರಲ್ಲಿಯೂ ಗುರುವಿದ್ದಾನೆ. ಒಳ್ಳೆಯದನ್ನು ಬೋಧಿಸಿದವರೆಲ್ಲರೂ ಗುರುವಿಗೆ ಸಮಾನವೆಂದರು. ಗುರುಗಳು ಪಾಠ ಪುಸ್ತಕದಲ್ಲಿರುವ ವಿಚಾರವಲ್ಲದೆ ಸಮಾಜದ ನೈತಿಕತೆ ಆಚಾರ-ವಿಚಾರ ಹಿರಿಯರಿಗೆ ಗೌರವ ನಡವಳಿಕೆ ಎಲ್ಲವನ್ನು ಶಿಕ್ಷಕರುಗಳು ತಿಳಿಸಿಕೊಡಬೇಕು. ನೈತಿಕತೆ ಇಲ್ಲದ ಶಿಕ್ಷಣ ಊಟಕ್ಕೆ ಉಪ್ಪಿನಕಾಯಿ ಇಲ್ಲದಂತೆ, ಬದುಕಿನ ತುಂಬಾ ಹೆಣಗಾಡುವುದು ಕೊನೆಗೊಮ್ಮೆ, ಹೆಣವಾಗುವುದು ಎಂದು ಅವರು ನುಡಿದರು. ಬುದ್ಧ ಹೇಳಿದಂತೆ ‘ಆಸೆಯೇ ದುಃಖಕ್ಕೆ ಮೂಲ’ ಆಸೆಯನ್ನು ತೊರೆದು ಲೋಕವನ್ನು ನೋಡಬೇಕು ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ರವರು ಮಾತನಾಡಿ ಅತ್ಯುತ್ತಮ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಬೆಳಕು ತೋರಿದ ಹಾಗೆಯೇ ಸಮಯಕ್ಕೆ ಸರಿಯಾಗಿ ಆಗಮಿಸಿ ವಿದ್ಯಾರ್ಥಿಗಳ ಬದುಕಲ್ಲಿ ಜ್ಯೋತಿ ಆಗುವ ಶಿಕ್ಷಕರಿಗಳಿಗೆ ನಮನ ಸಲ್ಲಿಸಿದರು. ಎರಡು ಬಾರಿ ಉಪ ರಾಷ್ಟ್ರಪತಿ ಒಂದು ಬಾರಿ ರಾಷ್ಟ್ರಪತಿ ಹಾಗೂ ಕುಲಪತಿಯಾಗಿ ಇದೆಲ್ಲವುದಕ್ಕಿಂತ ಮಿಗಿಲಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಸ್ಮರಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ನಡೆಸಿದ ಜಿಲ್ಲಾ ಆಡಳಿತ ಹಾಗೂ ಶಾಸಕರಾದ ಮಂತರ್ ಗೌಡ ರವರಿಗೂ ಧನ್ಯವಾದ ಸಲ್ಲಿಸಿದರು. 2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರಾದ ಶಾಲಿನಿ ಕೆ.ಆರ್, ಮೀನಾಕ್ಷಿ ಎ.ಡಿ, ವನಜ ಎಂ,ಜಾನ್ಸಿ ಕೆ.ವಿ,ಯೋಗೇಶ್ ಎಸ್.ಎ,ಅಬ್ದುಲ್ ರಬ್ ಎಮ್.ಎಸ್, ಎ.ಕೆ ಮಾಚಮ್ಮ,ಸುಷಾ ಕೆ, ಎಚ್ ಡಿ ಲೋಕೇಶ್. ಇವರಿಗೆ ಶಾಸಕರಾದ ಮಂತರ್ ಗೌಡ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಿವೃತ್ತ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಸ್ವಾಗತಿಸಿದರು. ಮೋಹನ್ ಪೆರಾಜೆ ಹಾಗೂ ಮಂಜುಳಾ ಚಿತ್ರಪುರ ನಿರೂಪಣೆ ನಿರ್ವಹಿಸಿದರು.  ಬಿಂದು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾಶಿವಯ್ಯ ಪಲ್ಲೆದ್, ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷರಾದ ಪೂರ್ಣೇಶ್, ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವಕಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ಮತ್ತಿತರರು ಇದ್ದರು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ತಲಕಾವೇರಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮೂರ್ನಾಡಿನಲ್ಲಿ ಅ.20ರಂದು 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಮಹೋತ್ಸವ; ವಾಹನಗಳ ಮೆರವಣಿಗೆ, ಬೊಂಬೆ ಕುಣಿತ ಆಕರ್ಷಣೆ; ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

ಅಕ್ಟೋಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮೂರ್ನಾಡು, NEWS DESK ಅ.17: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಅ.20ರಂದು ಮೂರ್ನಾಡಿನಲ್ಲಿ 33ನೇ…

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಅ. 18ರಂದು ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ವಿರಾಜಪೇಟೆಯಲ್ಲಿ ಅ.20ರಂದು ಅದ್ದೂರಿ ಆಯುಧ ಪೂಜೆ: ಬೈಕ್ ಸಾಹಸ ಪ್ರದರ್ಶನ, ಸಂಗೀತ ರಸಮಂಜರಿ ವಿಶೇಷ ಆಕರ್ಷಣೆ

ಅಕ್ಟೋಬರ್ 17, 2026

ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಅಕ್ಟೋಬರ್ 17, 2026

ಇಂದು ಮಡಿಕೇರಿಯಲ್ಲಿ ಜಾನಪದ ದಸರಾ ಸಂಭ್ರಮ; ಕಲಾ ಜಾಥಾ, ಜಾನಪದ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆ

ಅಕ್ಟೋಬರ್ 17, 2026

ಮಡಿಕೇರಿ ದಸರಾ ಸಂಭ್ರಮಕ್ಕೆ ಮೆರುಗು ನೀಡಿದ ಶ್ವಾನ ಪ್ರದರ್ಶನ; ಪ್ರಾಣಿ ಪ್ರಿಯರ ಮನಗೆದ್ದ ವಿವಿಧ ತಳಿಗಳು

ಅಕ್ಟೋಬರ್ 17, 2026

SSLC, ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ: ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ

ಅಕ್ಟೋಬರ್ 17, 2026

ನಾಳೆ ಮಡಿಕೇರಿಯಲ್ಲಿ ಮಹಿಳಾ ದಸರಾ: ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 17, 2026

ಅ.19ರಂದು ರೋಟರಿ ಮಡಿಕೇರಿಯಿಂದ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರ

ಅಕ್ಟೋಬರ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.