
ಮಡಿಕೇರಿ NEWS DESK ಸೆ.5 : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಳಿಯ ಗೋಲ್ಡ್ ಮತ್ತು ಡೈಮಂಡ್ಸ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ನಡೆದ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ ಸ್ಮೃತಿ ಎಸ್. ಭಾರದ್ವಾಜ್ ಪ್ರಥಮ ಬಹುಮಾನ ಗೆದ್ದಿದ್ದಾಳೆ. 4 ರಿಂದ 7 ವರ್ಷದೊಳಗಿನ ಮಕ್ಕಳ ವಿಭಾಗದ ಸ್ಪರ್ಧೆಯಲ್ಲಿ ಶ್ರೀಕೃಷ್ಣನ ಬಾಲಲೀಲೆಯ ಕೃಷ್ಣನಾಗಿ ಮಿಂಚಿದ ಸ್ಮೃತಿ ನೆರೆದಿದ್ದವರ ಮೆಚ್ಚುಗೆಗೆ ಪಾತ್ರಳಾಗಿ ಪ್ರಥಮ ಬಹುಮಾನ ಪಡೆದಳು. 5 ವರ್ಷದ ಸ್ಮೃತಿ ಪೊನ್ನಂಪೇಟೆ ಸಮೀಪದ ಬೇಗೂರು ಶ್ರೀ ಪೂಳೆಮಾಡು ಈಶ್ವರ ದೇವಸ್ಥಾನದ ಅರ್ಚಕರಾದ ಸುಂದರೇಶ ಭಾರದ್ವಾಜ್ ಹಾಗೂ ಆಶಿಕಾ ದಂಪತಿಯ ಪುತ್ರಿ.









