
ಮಡಿಕೇರಿ ಆ.6 NEWS DESK : ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್, ಎಸ್‍ಎನ್‍ಡಿಪಿ ಯೋಗಂ ಶಾಖೆ, ಯೂತ್ ಕಮಿಟಿ ಮತ್ತು ಮಹಿಳಾ ಕಮಿಟಿಯ ಸಂಯುಕ್ತಾಶ್ರಯದಲ್ಲಿ ಸೆ.7 ರಂದು ಏಳನೇ ಹೊಸಕೋಟೆಯಲ್ಲಿ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಟಿ.ಕೆ.ಸಾಯಿ ಕುಮಾರ್ ಕಾರ್ಯಕ್ರಮದ ಕುರಿತು ಮಾಹಿತಿ ನಿಡಿ, 7ನೇ ಹೊಸಕೋಟೆಯ ಬ್ರಹ್ಮಶ್ರೀ ನಾರಾಯಣಗುರು ಚಾರಿಟೆಬಲ್ ಟ್ರಸ್ಟ್ ಸಭಾಂಗಣದಲ್ಲಿ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಗುರುಗಳ ಜಯಂತಿಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಪೂಕಳಂ ಸ್ಪರ್ಧೆ ನಡೆಯಲಿದ್ದು, ಏಳನೇ ಹೊಸಕೋಟೆ ಗ್ರಾ.ಪಂ ಉಪಾಧ್ಯಕ್ಷರಾದ ಸೌಮ್ಯ ಸ್ಪರ್ಧೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಬೆ.8.30 ಗಂಟೆಗೆ ಎಸ್‍ಎನ್‍ಡಿಪಿ 7ನೇ ಹೊಸಕೋಟೆ ಶಾಖೆಯ ಅಧ್ಯಕ್ಷ ಟಿ.ಬಿ.ರಾಜೇಶ್ ಧ್ವಜಾರೋಹಣ ನೆರವೇರಿಸಲಿದ್ದು, 9 ಗಂಟೆಯಿಂದ 9.30ರ ವರೆಗೆ ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ನೇತೃತ್ವದಲ್ಲಿ ಗುರು ಪೂಜೆ ನೆರವೇರಲಿದೆ. 9.30 ಗಂಟೆಗೆ ನಡೆಯಲಿರುವ ಮೆರವಣಿಯನ್ನು ಅರಕಲಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದರು. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇರಳದ ವರ್ಕಲ ಶಿವಗಿರಿ ಮಠದ ಶ್ರೀ ಪ್ರೇಮಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಸಾಯಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಬೆಂಗಳೂರಿನ ಜೆ.ಪಿ.ಫೌಂಡೇಶನ್‍ನ ಅಧ್ಯಕ್ ಜೆ.ಪಿ.ಸುಧಾಕರ್, ಆರ್ಯ ಈಡಿಗರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಕೆ.ಪೋತ್‍ರಾಜ್ ಪಾಲ್ಗೊಳ್ಳಲಿದ್ದಾರೆಂದರು. ವಿಶೇಷ ಆಹ್ವಾನಿತರಾಗಿ ಕಿರಗಂದೂರು ಪ್ರವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ವಿ.ಎನ್.ಪದ್ಮನಾಭ, 7ನೇ ಹೊಸಕೋಟೆ ನಿವೃತ್ತ ಶಿಕ್ಷಕಿ ಸಾವಿತ್ರಿ ಕಾವೇರಪ್ಪ, ಏಳನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷರಾದ ಇ.ಬಿ.ಜೋಸೆಫ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯನ್, 7ನೇ ಹೊಸಕೋಟೆಯ ಶ್ರೀ ಮಹಾಗಣಪತಿ, ಗೋಪಾಲಕೃಷ್ಣ ದೇವಾಲಯದ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಸಂತ ಸೆಬಾಸ್ಟೀನ್ ಚರ್ಚ್ ಧರ್ಮ ಗುರು ರೆ.ಫಾ.ವಿ.ಎಂ.ಮಾಣಿ, ಗ್ರಾಮದ ನೂರುಲ್ ಇಸ್ಲಾಂ ಮಸೀದಿ ಖತೀಬ ಅಶ್ರಫ್ ಸಖಾಫಿ, ನಾಕೂರು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಜಿ.ರಾಜನ್, ಕುಶಾಲನಗರ ಕೇರಳ ಸಮಾಜ ಅಧ್ಯಕ್ಷ ರವೀಂದ್ರನ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ರಮೇಶ್ ಪಿಳ್ಳೆ ಆರ್., ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಮಣಿ ಮುಖೇಶ್ ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಶ್ರೀ ನಾರಾಯಣಗುರುಗಳ ಭಜನೆ ಕಲಿಕಾ ಶಿಬಿರದ ಮಕ್ಕಳಿಂದ ಭಜನೆ, ಹೆಣ್ಣು ಮಕ್ಕಳಿಂದ ತಿರುವಾದಿರಕ್ಕಳಿ, ಮಹಿಳೆಯರಿಂದ ತಿರುವಾದಿರಕ್ಕಳಿ, ಹಾಡುಗಾರಿಕೆ, ನೃತ್ಯ, ಅತಿಥಿಗಳಿಂದ ಹಿರಿಯರಿಗೆ ಸನ್ಮಾನ, ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆಯೆಂದು ತಿಳಿಸಿದರು. ಗೋಷ್ಠಿಯಲ್ಲಿ ಏಲನೇ ಹೊಸಕೋಟೆಯ ಎಸ್‍ಎನ್‍ಡಿಪಿ ಶಾಖೆಯ ಅಧ್ಯಕ್ಷ ರಾಜೇಶ್ ಟಿ.ಬಿ., ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಕೆ.ಜಿ.ಶಿವನ್, ಮಹಿಳಾ ಘಟಕದ ಕಾರ್ಯದರ್ಶಿ ನಿರ್ಮಲ ಪ್ರಕಾಶ್ ಉಪಸ್ಥಿತರಿದ್ದರು.








