
ಸೋಮವಾರಪೇಟೆ ಸೆ.9 NEWS DESK : ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರು ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯಿಂದ ಪ್ರವಾದಿಯವರ ಸಂದೇಶ ಜಾಥ ನಡೆಯಿತು. ಮಸೀದಿ ಖತೀಬರಾದ ಅಬ್ದುಲ್ ರೆಹಮಾನ್ ಸಖಾಫಿ, ಜಮಾತ್ ಅಧ್ಯಕ್ಷ ಕೆ.ಈ.ಶರೀಪ್, ಸದರ್ ಉಸ್ತಾದರಾದ ಬದುರುಲ್ ಮುನೀರ್ ಫಾಲಿಳಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮತ್ತಿತರರು ಇದ್ದರು. ಮಕ್ಕಳಿಂದ ದಫ್ ನಡೆಯಿತು.






































