
ಮಡಿಕೇರಿ ಸೆ.6 NEWS DESK : ಮಡಿಕೇರಿ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಮಾಹಾಸಭೆಯು ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, 2005 ರಲ್ಲಿ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ನವರ ಮಾರ್ಗದರ್ಶ ಹಾಗೂ ಅಂದಿನ ಕೊಡವ ಸಮಾಜದ ನೇತೃತ್ವದಲ್ಲಿ 472 ಸದಸ್ಯರಿಂದ ಸಂಘವು ಪ್ರಾರಂಭಗೊಂಡಿದೆ. ಇದೀಗ 20 ವರ್ಷಗಳು ಕಳೆದಿದ್ದು, ಪ್ರಸ್ತುತ 2143 ಸದಸ್ಯರಿದ್ದಾರೆ. ಪಾಲುಹಣ ಒಂದು ಕೋಟಿ ಮೇಲ್ಪಟ್ಟಿದ್ದು, ಈ ಬಾರಿ 28.29 ಲಕ್ಷ ಲಾಭಾಂಶ ಪಡೆದಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದೆಂದರು. ಸಂಘದ ಸದಸ್ಯತ್ವವನ್ನು ಪಡೆಯುವುದರ ಮೂಲಕ ಸಂಘದ ಸೌಲಭ್ಯವನ್ನು ಪಡೆಯುವುದು ಹಾಗೂ ಸಂಘದಿಂದ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕಾರಿಸಬೇಕೆಂದರು. ವೇದಿಕೆಯುಲ್ಲಿ ನಿರ್ದೇಶಕರಾದ ಚೋವಂಡ ಡಿ.ಕಾಳಪ್ಪ, ಅಂಜಪರವಂಡ ಉಷಾ, ಕೊಂಗಾಂಡ ಎ.ತಿಮ್ಮಯ್ಯ, ನಂದೇಟಿರ ರಾಜ ಮಾದಪ್ಪ,ಕೇಕಡ ಎಮ್.ಸುಗುಣ, ಡಾ.ಸಣ್ಣುವಂಡ ಕಾವೇರಪ್ಪ, ಮೇದುರ ಪಿ.ಕಾವೇರಪ್ಪ, ಮುಕ್ಕಾಟೀರ ಪೊನ್ನಮ್ಮ, ಚೆರ್ಮಂದಂಡ ಜಿ. ಪೊನ್ನಪ್ಪ, ಕಾಂಡೆರ ಯು.ಕುಟ್ಟಪ್ಟ ಹಾಜರಿದ್ದರು. ಸಭೆಯಲ್ಲಿ ಹತ್ತನೆ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು. ಬೊಪ್ಪಂಡ ಸರಳಾ ಕರುಂಬಯ್ಯ ಪ್ರಾರ್ಥಿಸಿ, ಮಹಾಸಭೆಯ ವರದಿಯನ್ನು ಸಂಘದ ಮುಖ್ಯಕಾರ್ಯ ನಿರ್ವಹಾಧಿಕಾರಿ ಕಳ್ಳೇಂಗಡ ನೀಮಾ ಮಂಡಿಸಿದರು. ಉಪಾಧ್ಯಕ್ಷ ರಾದ ಕುಡುವಂಡ ಬಿ.ಉತ್ತಪ್ಪ ವಂದಿಸಿದರು.






































