
ಮಡಿಕೇರಿ ಸೆ.6 NEWS DESK : ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಕುಂಜಿಲ ಜಮಾತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಪ್ರವಾದಿ ಪೈಗಂಬರ್ ಸವ ಅವರ 1500ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಬಹುಮಾನ್ಯ ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆದೊಂದಿಗೆ ಮೀಲಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ ಮತ್ತು ಷರೀಫ್ ಲತೀಫ್ ಉಸ್ತಾದ್ ಅವರು ಮೌಲೂದ್ ಮಜಿಲಿಸ್ ನ ನೇತೃತ್ವ ವಹಿಸಿದ್ದರು. ಫಾರೂಕ್ ಪುದರೇಕಾರಂಡ ಹಾಗೂ ಹಾಫಿಜ್ ಹಾಶಿರ್ ಅಲ್ ಅಝರಿ ಉಸ್ತಾದರ ನೇತೃತ್ವದಲ್ಲಿ ಬುರ್ದಾ ಮಜಲಿಸ್ ನಡೆಯಿತು. ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ನೇತಾರರಾದ ಜಲೀಲ್ ನಿಜಾಮಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು. ಮಿತಿ ಸದಸ್ಯರಾದ ನಾಸಿರ್ ಪಯಡತಂಡ ಸ್ವಾಗತಿಸಿದರು, ಯುಎಇ ಪೈನೆರಿ ಸಮಿತಿ ಕಾರ್ಯದರ್ಶಿ ನಿಜ್ಹಾರ್ ಕುಂಡಂಡ ವಂದಿಸಿದರು.
ವರದಿ : ರಫೀಕಲಿ ಕುಂಡಂಡ ದುಬೈ









