
ಮಡಿಕೇರಿ ಸೆ.8 NEWS DESK : ನಾಪೋಕ್ಲು ಪಟ್ಟಣದ ನಿವಾಸಿ ಎಸ್ ಮತ್ತು ಎಸ್ ಹಾರ್ಡ್ ವೇರ್ ಮಳಿಗೆಯ ಮಾಲೀಕರಾದ ಪಿ.ಪಿ.ಅಹಮದ್ ಹಾಜಿ (72) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಅಂತ್ಯಕ್ರಿಯೆಯು ಇಂದು ( ಸೆ.8 ) ಮಧ್ಯಾಹ್ನದ ನಂತರ ನಾಪೋಕ್ಲುವಿನ ಮೊಹಿಯುದ್ದೀನ್ ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.








