
ಮಡಿಕೇರಿ ಸೆ.8 NEWS DESK : ಈದ್ ಮಿಲಾದ್ ಅಂಗವಾಗಿ ಮಡಿಕೇರಿಯ ಬದ್ರಿಯಾ ಜಮಾಅತ್ ಆಶ್ರಯದಲ್ಲಿ ನಗರದಲ್ಲಿ ಬೃಹತ್ ಮಿಲಾದ್ ರ‍್ಯಾಲಿ ನಡೆಯಿತು. ನಗರದ ಗದ್ದುಗೆ ಬಳಿಯಿಂದ ಆರಂಭಗೊಂಡ ಜಾಥಾ ಹಳೆ ಖಾಸಗಿ ಬಸ್ ನಿಲ್ದಾಣದ ಮಾರ್ಗವಾಗಿ ತೆರಳಿ ಜಮಾಅತ್ ಸಭಾಂಗಣದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ದಫ್ ಪ್ರದರ್ಶನ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಾಗವಹಿಸಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಶಾಂತಿ, ಸಂದೇಶಗಳನ್ನು ಸಾರಿದರು.









