
ಸುಂಟಿಕೊಪ್ಪ ಸೆ.9 NEWS DESK : ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಕೆ.ಹೆಚ್.ಫಿದಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಹಾಗೂ ಇನ್ನರ್ವಿಲ್ ಕ್ಲಬ್ ಆಫ್ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಮ್ಯಾನ್ಸ್‍ಕಾಂಪೌಡ್‍ನಲ್ಲಿ 17 ರ ವಯೋಮನದವರಿಗೆ ಆಯೋಜಿಸಲಾದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಫಿದಾ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದ್ದಾಳೆ. ಕಳೆದ ಬಾರಿ ಶಾಲಾ ಮಟ್ಟದ ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ತೆರಳಿ ಸೆಮಿಪೈನಲ್ ಹಂತದವರೆಗೂ ಸಾಧನೆಯನ್ನು ಮಾಡಿದ್ದಾಳೆ. ಕೆ.ಹೆಚ್.ಫಿದಾ ಸುಂಟಿಕೊಪ್ಪ ಸಮಾಜ ಸೇವಕ ಕೆ.ಎಂ.ಹನೀಫ್ ಹಾಗೂ ಎಂ.ಹೆಚ್.ಸಾಹಿರ ದಂಪತಿಗಳ ಪುತ್ರಿ.









