Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ತೊರೆನೂರು : ಸಾಮಾಜಿಕ ಮೌಲ್ಯಗಳು ಚಿಂತನಾ ಗೋಷ್ಠಿ : ಬಸವಣ್ಣ ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನ : ವಚನ ಕುಮಾರಸ್ವಾಮಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ತೊರೆನೂರು : ಸಾಮಾಜಿಕ ಮೌಲ್ಯಗಳು ಚಿಂತನಾ ಗೋಷ್ಠಿ : ಬಸವಣ್ಣ ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನ : ವಚನ ಕುಮಾರಸ್ವಾಮಿ

ಸೆಪ್ಟೆಂಬರ್ 10, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ ಸೆ.10 NEWS DESK : ಬದುಕಿನ ಸತ್ಯವನ್ನು ವಚನ ರೂಪದಲ್ಲಿ ತೆರೆದಿಟ್ಟ ಮಹಾನ್ ಚೇತನ ವಿಶ್ವಗುರು ಬಸವಣ್ಣ ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಕುಶಾಲನಗರ ತಾಲ್ಲೂಕಿನ ತೊರೆನೂರು ಶ್ರೀ ವಿರಕ್ತಮಠದಲ್ಲಿ ಮಾಸಿಕ ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು ಚಿಂತನಾ ಗೋಷ್ಠಿಯಲ್ಲಿ ಪ್ರವಚನ ನೀಡಿದ ಅವರು, ತಲೆಯಲ್ಲಿ ಸದ್ವಿಚಾರ, ಎದೆಯಲ್ಲಿ ಸದ್ಭಾವ, ಕೈಯಲ್ಲಿ ಸತ್ಕಾರ್ಯ ಮತ್ತು ಬಾಯಿಂದ ಬರುತ್ತಿದ್ದಂತಹ ಸವಿಮಾತುಗಳನ್ನು ವಚನ ಸಾಹಿತ್ಯ ರೂಪದಲ್ಲಿ ನೀಡಿದ ಶರಣರ ಚಿಂತನೆಗಳು ಸದಾ ಕಾಲಕ್ಕೂ ಸರ್ವಹಿತ. ಅಂತಹ ಶರಣರ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಉಪಕಾರಿಯಾದವರು ಸುತ್ತೂರಿನ 23 ನೇ ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು. ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಒಂದು ಸಲ ವಿದ್ಯಾರ್ಥಿನಿಲಯ ನಡೆಸಲು ದಿನಸಿ ಪದಾರ್ಥಗಳು ಇಲ್ಲದಿದ್ದಾಗ ತಮ್ಮ ಚಿನ್ನದ ಕರಡಿಗೆ ಮತ್ತು ಚಿನ್ನದ ರುದ್ರಾಕ್ಷಿ ಸರ ಗಿರವಿ ಇಟ್ಟು ವಿದ್ಯಾರ್ಥಿಗಳಿಗೆ ದಾಸೋಹ ವ್ಯವಸ್ಥೆ ಮಾಡಿದ ಮಾತೃಹೃದಯಿಗಳು. ಅಂತಹ ವ್ಯಕ್ತಿಗಳ ಜಯಂತಿ ಆಚರಿಸಿ ಅವರ ತತ್ವಗಳನ್ನು ಅನುಸರಿಸುವುದರಿಂದ ನಮ್ಮ ಮನದ ಮಲಿನ ದೂರವಾಗುತ್ತದೆ ಎಂದರು. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಅದೆಂತಹ ಅಡೆತಡೆಗಳು ಬಂದರೂ ಕೂಡ ಸಮಾಧಾನಿಯಾಗಿರಬೇಕು ಎಂಬುದನ್ನು ಅಕ್ಕಮಹಾದೇವಿ ತನ್ನ ವಚನದಲ್ಲಿ ಬೋಧಿಸಿದ್ದಾರೆ. ಹಾಗಾಗಿ ಮನೆಯಲ್ಲಿನ ಅತ್ತೆ ಮಾವ ಎಂಬ ಹಿರಿಯ ಜೀವಗಳು ಏನಾದರೂ ಹೇಳಿದಾಗ ಸೊಸೆಯಾದವರು ಸಮಾದಾನಿಯಾಗಿಯೇ ಅದನ್ನು ಸ್ವೀಕರಿಸುವ ಮೂಲಕ ಸವಿಯಾದ ಕುಟುಂಬಕ್ಕೆ ಅಡಿಗಲ್ಲಾಗಬೇಕು. ಇಂತಹ ಸಂಸ್ಕಾರಗಳನ್ನು ನಾಡಿಗೆ ವಚನಗಳ ಮೂಲಕ ಬಿತ್ತುವಲ್ಲಿ ಹಾಗೂ ಬೆಳೆಯುವಲ್ಲಿ ಜೆ.ಎಸ್.ಎಸ್ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಅನ್ನ, ಆಶ್ರಯ ಮತ್ತು ಅರಿವು ನೀಡಿ ಗಂಧದ ಕೊರಡಿನಂತೆ ತಾವು ಸವೆದು ಸಮಾಜಕ್ಕೆ ಸುಧೆಯನ್ನು ನೀಡಿ ಸುತ್ತೂರಿನ ಸಿರಿಗಂಧ ಎನಿಸಿಕೊಂಡವರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅವರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಅನ್ಯ ರಾಜ್ಯ ಮತ್ತು ಅನ್ಯ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಸ್ಥಾಪನೆಯಾಗಿ ಸುತ್ತೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು‌. ಕಾರ್ಯಕ್ರಮದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ ಸಂಸ್ಕಾರವನ್ನು ರೂಢಿಸಿಕೊಂಡು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳಲು ಮಹಾತ್ಮರ ಜಯಂತಿ ಪೂರಕವಾಗಿವೆ. ತಂದೆ ತಾಯಿಗಳು ಸಂಸ್ಕಾರವಂತರಾದರೆ ಮಕ್ಕಳು ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಾರೆ ಎಂದರು. ಕೆ.ಆರ್.ನಗರ ತಾ. ಅರಕೆರೆ ವಿರಕ್ತಮಠದ ಶ್ರೀ ಸಿದ್ಧೇಶ್ವರಸ್ವಾಮಿಗಳು ಆಶೀರ್ವಚನ ನೀಡಿ ಇಂದು ಮಾನವರು ಸಂಸಾರ ಬಂಧನದಲ್ಲಿ ಸಿಲುಕಿ ಸಂಸ್ಕಾರ ಕಣ್ಮರೆಯಾಗುತ್ತಿದೆ. ಶಿವನುಭವ ಗೋಷ್ಠಿಗಳು ಶಿವತ್ವವನ್ನು ಮೈಗೂಡಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು. ಇದೇ ಸಂದರ್ಭದಲ್ಲಿ ಕುಶಾಲನಗರದ ಕೆನರಾಬ್ಯಾಂಕ್ ಕೃಷಿ ವಿಸ್ತರಣಾ ಅಧಿಕಾರಿ ಲೌಕಿಕ್ ಮತ್ತು ದಾಸೋಹಿ ಎಚ್ ಆರ್ ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಕೊಡಗು ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್ .ವಿ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶತಾಯುಷಿ ಮರೂರು ಗ್ರಾಮದ ಹೆಚ್.ವಿ. ಶಿವರುದ್ರಪ್ಪ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರೇಮ್ ಕುಮಾರ್, ಕೊಡಗು ಜಿಲ್ಲಾ ಶ.ಸಾ.ಪ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಯ್ಯ, ಖಜಾಂಚಿ ಹೆಚ್.ಪಿ ಉದಯ್ ಕುಮಾರ್, ನಿರ್ದೇಶಕ ಗಣೇಶ್, ಶಿಕ್ಷಕ ಬಸವರಾಜು ಇತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ನಾಳೆ ಮಡಿಕೇರಿಯಲ್ಲಿ ಮಹಿಳಾ ದಸರಾ: ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 17, 2026

ಅ.19ರಂದು ರೋಟರಿ ಮಡಿಕೇರಿಯಿಂದ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರ

ಅಕ್ಟೋಬರ್ 17, 2026

ಗಗನಕ್ಕೇರಿದ ಬೇಳೆಕಾಳುಗಳ ಬೆಲೆ; ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ!

ಅಕ್ಟೋಬರ್ 17, 2026

ಅ.19ರಂದು ರೋಟರಿ ಮಡಿಕೇರಿಯಿಂದ ಉಚಿತ ಮೂಳೆ ಮತ್ತು ನರರೋಗ ತಪಾಸಣಾ ಶಿಬಿರ

ಅಕ್ಟೋಬರ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.17 : ರೋಟರಿ ಮಡಿಕೇರಿ ವತಿಯಿಂದ ರವಿ ಆರ್ಥೋಪೆಡಿಕ್ ಸೆಂಟರ್ ಸಹಯೋಗದಲ್ಲಿ ಅ.19ರಂದು ನಗರದ ಗಾಂಧಿ…

ಗಗನಕ್ಕೇರಿದ ಬೇಳೆಕಾಳುಗಳ ಬೆಲೆ; ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ!

ಅಕ್ಟೋಬರ್ 17, 2026

ಬೇಟೋಳಿ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ; ವನದುರ್ಗೆಗೆ ವಿಶೇಷ ಪೂಜೆ

ಅಕ್ಟೋಬರ್ 17, 2026

ಮೈಸೂರು ದಸರಾ ಕಂಬಳಕ್ಕೆ ತೆರಳುವ ಕೋಣಗಳಿಗೆ ಮಡಿಕೇರಿಯಲ್ಲಿ ಸ್ವಾಗತ

ಅಕ್ಟೋಬರ್ 17, 2026

ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಪೋಷಕರ ಪ್ರೋತ್ಸಾಹ ಅಗತ್ಯ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 16, 2026

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ : ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ

ಅಕ್ಟೋಬರ್ 16, 2026

ಶಿರಂಗಾಲದಲ್ಲಿ ಎಸ್.ವಿ. ನಂಜುಂಡಪ್ಪ ಅವರಿಗೆ ನುಡಿನಮನ; ನಿಸ್ವಾರ್ಥ ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಮಾಜ ಮನ್ನಣೆ ನೀಡಲಿ: ಅರಮೇರಿ ಸ್ವಾಮೀಜಿ

ಅಕ್ಟೋಬರ್ 16, 2026

ರೋಟರಿ ಮಿಸ್ಟಿ ಹಿಲ್ಸ್‌ನ 13ನೇ ವರ್ಷದ ಮಕ್ಕಳ ದಸರಾ ಯಶಸ್ವಿ; ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ; ಸತತ ಮೂರು ವರ್ಷಗಳ ಹ್ಯಾಟ್ರಿಕ್ ಸಾಧನೆ

ಅಕ್ಟೋಬರ್ 16, 2026

ಅ.17 ರಂದು ಕೊಡಗು ಜಿಲ್ಲೆಯಲ್ಲಿ ಕಾವೇರಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026

ಅ.17ಕ್ಕೆ ಕೊಡಗು ಜಿಲ್ಲೆಯಲ್ಲಿ ತುಲಾ ಸಂಕ್ರಮಣದ ರಜೆ

ಅಕ್ಟೋಬರ್ 16, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.