
ಭಾಗಮಂಡಲ ಸೆ.10 NEWS DESK : ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹ್ಯಾಂಡ್‌ಬಾಲ್‌ನಲ್ಲಿ ಪ್ರಾಥಮಿಕ ಬಾಲಕ ಮತ್ತು ಬಾಲಕಿಯರು ಪ್ರಥಮ, ಪ್ರೌಢ ಶಾಲಾ ಬಾಲಕ ಮತ್ತು ಬಾಲಕಿಯರು ಪ್ರಥಮ, ಪ್ರಾಥಮಿಕ ಶಾಲಾ ಬಾಲಕಿಯರು ಕಬಡ್ಡಿ ಪ್ರಥಮ, ಥ್ರೋಬಾಲ್ ಪ್ರಥಮ, ಪ್ರೌಢ ಶಾಲಾ ಬಾಲಕರು ಥ್ರೋಬಾಲ್ ದ್ವಿತೀಯ, ಪ್ರೌಢ ಶಾಲಾ ಬಾಲಕಿಯರ ಕಬಡ್ಡಿ ಪ್ರಥಮ. ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಮಕ್ಕಳ ಈ ಕ್ರೀಡಾ ಸಾಧನೆಗೆ ಪ್ರಾಂಶುಪಾಲರಾದ ಲೋಕೇಶ್, ನಿಲಯಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್, ವ್ಯವಸ್ಥಾಪಕರಾದ ಕೆ.ಜಿ.ಚೇತನ್ ಮತ್ತು ಎಲ್ಲಾ ಬೋಧಕಾ ಬೋಧಕೇತರ ಸಿಬ್ಬಂದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.









