
ನಾಪೋಕ್ಲು ಸೆ.10 NEWS DESK : ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕೊಡಗು ಚಾಂಪಿಯನ್ ಶಿಪ್-2025 ಜರುಗಿತು. 17 ವರ್ಷದ ಒಳಗಿನ ವಯೋಮಿತಿಯಲ್ಲಿ ಪಿ.ಡಿ.ಬೃಂದ ಸಿಂಗಲ್ಸ್ ರನ್ನರ್, ಡಬಲ್ಸ್ ಪಿ.ಡಿ.ಬೃಂದ ಮತ್ತು ಕಾವೇರಮ್ಮ ಟಿ.ಬಿ ರನ್ನರ್ಸ್, ಮಹಿಳೆಯರ ವಿಭಾಗದಲ್ಲಿ ಪಿ.ಡಿ.ಬೃಂದ ಮತ್ತು ಪೂವಮ್ಮ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಬೃಂದಾ ಬಾವಲಿ ಗ್ರಾಮದ ಪೊನ್ನಚ್ಚನ ದಿನೇಶ್ ಕುಮಾರ್ ಮತ್ತು ಡಾಲಿ ದಂಪತಿಯ ಪುತ್ರಿ. ಕಾವೇರಮ್ಮ ಮರಗೋಡು ಗ್ರಾಮದ ತಾತಪಂಡ ಬೆಳ್ಯಪ್ಪ ಮತ್ತು ಬೋಜಮ್ಮ ದಂಪತಿಯ ಪುತ್ರಿ. ಮೂರ್ನಾಡು ವಿದ್ಯಾ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾಗಿದ್ದು ದೈಹಿಕ ಶಿಕ್ಷಕರಾದ ಕೆ.ಕೆ.ಬೋಪಣ್ಣ ಮತ್ತು ಯತೀಶ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ವರದಿ : ದುಗ್ಗಳ ಸದಾನಂದ.









