
ಸುಂಟಿಕೊಪ್ಪ ಸೆ.10 NEWS DESK : 7ನೇ ಹೊಸಕೋಟೆ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಕನ್ಯಾಮಾತೆ ಮರಿಯಮ್ಮನವರ ಜನ್ಮ ದಿನೋತ್ಸವದ ಅಂಗವಾಗಿ ಅಡಂಬರ ಬಲಿಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾದ ರೇ.ಫಾ ವಿ.ಎಂ.ಮಾಣಿ ಹಾಗೂ ಕೊಪ್ಪ ಸಂತಮೇರಿ ಸೆಮಿನಿರಿ ಸಿಎಂಐ ರೇಕ್ಟರ್ ರೇ.ಫಾ.ನೀಬಿನ್ ಕನ್ಯಾಮಾತೆ ಮರಿಯಮ್ಮನವರ ಜನ್ಮದಿನೋತ್ಸವದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಅಡಂಬರ ಬಲಿಪೂಜೆಯನ್ನು ಸಮರ್ಪಿಸಿದರು. ದೇವಾಲಯದ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತಭಕ್ತಾಧಿಗಳು ಮಾತೆ ಬೊಂಬಿನ ಅವರ ಪ್ರತಿಮೆಯನ್ನು ಹಿಡಿದುಕೊಂಡು ದೇವಾಲಯದ ಆವರಣದಲ್ಲಿ ಜಪಸರ ಪ್ರಾರ್ಥನೆಯನ್ನು ನೇರವೇರಿಸುವ ಮೂಲಕ ಮಾಂತಿಪೇಸ್ತ್‍ನ ಆರ್ಶಿವಚನವನ್ನು ನೀಡಿದರು. ಭಕ್ತಾಧಿಗಳು ಪರಸ್ಪರ ಮಾತೆ ಮರಿಯಮ್ಮನವರ ಜನ್ಮದಿನದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.









