
ಚೆಟ್ಟಳ್ಳಿ ಸೆ.13 NEWS DESK : ಅಂತರಾಷ್ಟ್ರೀಯ ಮಟ್ಟದ ರ‍್ಯಾಲಿಯಲ್ಲಿ ವಿಜೇತರಾದ ಕೊಂಗೆಟ್ಟಿರ ಬೋಪಯ್ಯ ಅವರನ್ನು ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಮುಳ್ಳಂಡ ಶೋಭಾ ಚಂಗಪ್ಪ ಹಾಗೂ ಪದಾಧಿಕಾರಿಗಳು ಬೋಪಯ್ಯ ಬೋಪಯ್ಯ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರೆ, ಹಿರಿಯ ಸದಸ್ಯರಾದ ಪುತ್ತರಿರ ಪ್ರೇಮಾ ಭೀಮಯ್ಯ, ಐಚೆಟ್ಟೀರ ಚೋಂದಮ್ಮ ಹೂಗುಚ್ಚ ನೀಡಿ ಗೌರವಿಸಿದರು. ಕೊಂಗೇಟೀರ ಸಂಗೀತ ಅಚ್ಚಪ್ಪ ಕಿರುಪರಿಚಯಿಸಿದರು. ಹಿರಿಯರಾದ ಕೊಂಗೇಟಿರ ಕುಸುಮ ಪೊನ್ನಪ್ಪ ಹಾಗೂ ಕೊಂಗೇಟಿರ ವೀಣಾ ಅಪ್ಪಣ್ಣ ರ‍್ಯಾಲಿ ಸಾಧನೆಯ ಬಗ್ಗೆ ಪ್ರಶಂಸಿದರು. ಕೊಂಗೇಟೀರ ಬೋಪಯ್ಯ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ರ‍್ಯಾಲಿಯಲ್ಲಿ ಸಾಧನೆ ಮಾಡಬೇಕೆಂಬ ಗುರಿಹೊಂದಿದ್ದು, ಹಲವು ರ‍್ಯಾಲಿಯಲ್ಲಿ ಸಾಧನೆಯನ್ನು ತೋರಿದ್ದೇನೆ. ತನ್ನ ತಾಯಿ ಹಾಗೂ ಪತ್ನಿ ನನ್ನ ಸಾಧನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಈ ಬಾರಿಯ ಅಂತರ ರಾಷ್ಟ್ರೀಯ ರ‍್ಯಾಲಿಯಲ್ಲಿ ಸಾಧನೆಗೈಯಲ್ಲು ಸಾಧ್ಯ ವಾಗಿದೆಂದರು. ಶೋಭ ಚಂಗಪ್ಪ ಸ್ವಾಗತಿಸಿದರು. ಮನೆಪಂಡ ಅಂಜಲಿ ಸೋಮಯ್ಯ ವಂದಿಸಿದರು. ಈ ಸಂದರ್ಭ ಕ್ಲಬ್ ನ ಉಪಾಧ್ಯಕ್ಷೆ ಕೆಚ್ಚೇಟೀರ ರತಿ ಕಾರ್ಯಪ್ಪ, ಕಾರ್ಯದರ್ಶಿ ಕೊಂಗೇಟೀರ ವೀಣಾ ಅಪ್ಪಣ್ಣ, ಖಜಾಂಚಿ ಮುಳ್ಳಂಡ ಸುಶೀಲ ತಮ್ಮಯ್ಯ, ಪಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.









