Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*
  • *ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*
  • *ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*
  • *ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*
  • *ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 
  • *ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*
  • *ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*
  • *ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*
  • *ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*
  • *ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಐಗೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 15, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸುಂಟಿಕೊಪ್ಪ ಸೆ.15 NEWS DESK : ಐಗೂರು ಕೃಷಿ ಪತ್ತಿನ ಸಹಕಾರ ಸಂಘವು 1,12,07,041 ರೂಗಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಬಿ.ಶಿವಕುಮಾರ್ ತಿಳಿಸಿದರು. ಸಂಘದ ಸಭಾಂಗಣದಲ್ಲಿ ನಡೆದ 49ನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 2024-25ನೇ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿನ ಪ್ರಾ.ಕೃ.ಪ.ಸ.ಸಂಘಗಳ ಪೈಕಿ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿ ಕೆಡಿಸಿಸಿ ಬ್ಯಾಂಕಿನ ಸದಸ್ಯ ಸಹಕಾರ ಸಂಘಗಳಿಗೆ ನೀಡುವ ಬಹುಮಾನ ಮತ್ತು ಪ್ರಶಸ್ತಿಗೆ ಆಯ್ಕೆಯಾಗಿ, ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಥಮ ಬಹುಮಾನ ಮತ್ತು ಪ್ರಶಸ್ತಿ ದೊರಕಿದೆ. ಅಪೆಕ್ಸ್ ಬ್ಯಾಂಕಿನಿಂದಲೂ ಉತ್ತಮ ಶ್ರೇಣಿಯಲ್ಲಿ ಕಾರ್ಯನಿರ್ವಹಿಸಿದಕ್ಕಾಗಿ ಬಹುಮಾನ ದೊರೆತ್ತಿದೆ ಎಂದು ಅವರು ಹೇಳಿದರು. ಸಂಘವು ಉತ್ತಮ ಸೇವೆ ನೀಡುವುದರೊಂದಿಗೆ ರೂ. 200 ಕೋಟಿಗಳಷ್ಟು ವ್ಯವಹಾರ ನಡೆಸಿ ರೂ. 1 ಕೋಟಿ 12 ಲಕ್ಷÀ್ಷ ನಿವ್ವಳ ಲಾಭಗಳಿಸಿದ್ದು ವರ್ಷದಿಂದ ವರ್ಷಕ್ಕೆ ಸಂಘ ಲಾಭದತ್ತ ದಾಪುಗಾಲು ಇಡುತ್ತಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಬರುವ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದ್ದು, ಆ ನಿಟ್ಟಿನಲ್ಲಿ ಸುವರ್ಣಭವನ ನಿರ್ಮಿಸಲಾಗುವುದು ಇದಕ್ಕೆ ಸದಸ್ಯರುಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ಸಂಘದಲ್ಲಿ ಮಾರ್ಚ್ 2025ಕ್ಕೆ ಒಟ್ಟು 1875 ಜನರ ಪೂರ್ಣ ಪಾಲು ಹೊಂದಿದ ಸದಸ್ಯರುಗಳಿದ್ದು, ರೂ. 45 ಕೋಟಿ 62 ಲಕ್ಷ ದುಡಿಯುವ ಬಂಡವಾಳವಿರುತ್ತದೆ. ರೂ. 2 ಕೋಟಿ 35 ಲಕ್ಷ ಪಾಲು ಬಂಡವಾಳವಿರುತ್ತದೆ. ಒಟ್ಟು ರೂ. 37 ಕೋಟಿ 76 ಲಕ್ಷಗಳನ್ನು ವಿವಿಧ ರೀತಿಯ ಸಾಲಗಳಾಗಿ ನೀಡಿದ್ದು ಈ ಪೈಕಿ ನಮ್ಮ ಸಂಘದ ಸ್ವಂತ ಬಂಡವಾಳದಿಂದ ರೂ. 17 ಕೋಟಿ 38 ಲಕ್ಷಗಳನ್ನು ವಿತರಿಸಲಾಗಿದೆ. ಸ್ವಸಹಾಯ ಗುಂಪು ಸಾಲವನ್ನು ಮತ್ತು ಕೆ.ಸಿ.ಸಿ ಸಾಲವನ್ನು ಶೇ. 100 ರಷ್ಟು ವಸೂಲಾತಿ ಮಾಡಲಾಗಿದೆ. ಸಂಘದಲ್ಲಿ ಎಲ್ಲಾ ವಿಧದ ಠೇವಣಿಗಳು ಸೇರಿ ಒಟ್ಟು ರೂ. 16 ಕೋಟಿ ಠೇವಣಿಗಳು ಇರುತ್ತದೆ. 472 ಕುಟುಂಬದ 1644 ಸದಸ್ಯರುಗಳನ್ನು ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿದ್ದು ರೂ. 2 ಲಕ್ಷಗಳನ್ನು ಈ ಯೋಜನೆಗೆ ಜಮೆ ಮಾಡಲಾಗಿದ್ದು ಹಲವಾರು ಸದಸ್ಯರು ಇದರ ಪ್ರಯೋಜನವನ್ನು ಪಡೆದಿರುತ್ತಾರೆ. ಸಂಘದಲ್ಲಿ ವಷಾಂತ್ಯಕ್ಕೆ ಒಟ್ಟು ರೂ. 22 ಲಕ್ಷದ 25 ಸಾವಿರ ಮರಣ ನಿಧಿ ಜಮೆಯಾಗಿರುತ್ತದೆ. ನಿಧನರಾದ ಸದಸ್ಯರ ನಾಮಿನಿಯವರಿಗೆ 2 ಲಕ್ಷಗಳನ್ನು ಮರಣ ನಿಧಿಯಾಗಿ ಪಾವತಿಸಲಾಗಿದೆ. ಐಗೂರು ಹಾಗೂ ಯಡವಾರೆ ನ್ಯಾಯಬೆಲೆ ಅಂಗಡಿಯಲ್ಲಿ ನಿಯಂತ್ರಿತ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ. ಗೊಬ್ಬರ ವ್ಯಾಪಾರವನ್ನು ಹಾಗೂ ಕೋವಿ ತೋಟಾಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೇ ಸಂದರ್ಭ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಹಾಗೂ ಸಂಘದ ವ್ಯಾಪ್ತಿಯ ಸರ್ಕಾರಿ ಶಾಲೆಯ 7ನೇ ತರಗತಿ, ಎಸ್‍ಎಸ್‍ಎಲ್‍ಸಿ, ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಹಾಗೂ ಸಂಘದ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಮುಂದೆಯು ಸದಸ್ಯರು ನಮ್ಮ ಸಂಘದೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು, ಉತ್ತಮ ವ್ಯಹಾರವನ್ನು ಮಾಡುತ್ತಾ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಅಧ್ಯಕ್ಷರಾದ ಹೆಚ್.ಬಿ.ಶಿವಕುಮಾರ್, ಉಪಾಧ್ಯಕ್ಷರಾದ ಡಿ.ಎಸ್.ಚಂಗಪ್ಪ, ನಿರ್ದೇಶಕರುಗಳಾದ ಡಿ. ಹೆಚ್.ವಿಶ್ವನಾಥ ರಾಜೇಅರಸ್, ಕೆ.ಪಿ.ರೋಷನ್, ಎಲ್.ಎಂ.ರಾಜೇಶ್, ಸುನುಕಿಶೋರ್, ಬಿ.ಕೆ.ದಾಕ್ಷಾಯಿಣಿ, ಕೆ.ಈ.ಕುಟ್ಟಪ್ಪ, ಎಸ್.ಬಿ.ಸಂತೋಷ್, ಎಸ್.ಪಿ.ಕೀರ್ತೀಪ್ರಸಾದ್, ಕೆ.ಎಲ್.ಹೊನ್ನಪ್ಪ, ಹೆಚ್.ಜೆ.ಬಸಪ್ಪ, ಎಸ್.ಕೆ.ಲಕ್ಷ್ಮಣ, ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಎ.ಎ.ಡಿಕ್ಕಿರಾಜು ಹಾಗೂ ಮೇಲ್ವಿಚಾರಕರಾದ ಕೆ.ಎಂ.ಶ್ರೀಜು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.10 ರಿಂದ ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಮೂರನೇ ಆವೃತ್ತಿ ಆರಂಭ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಸುಂಟಿಕೊಪ್ಪದಲ್ಲಿ ಶಾಂತಿ ಸಭೆ : ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ದಿನೇಶ್‍ಕುಮಾರ್ ಕರೆ*

ಮಾರ್ಚ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.18 NEWS DESK : ಹಬ್ಬದ ದಿನದಂದು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಕುಶಾಲನಗರ ವೃತ್ತ ನಿರೀಕ್ಷಕರಾದ…

*ಸೋಮವಾರಪೇಟೆ : ಕಾರ್ಮಿಕರಿಗೆ ಪೂರ್ವಭಾವಿ ಕಲಿಕಾ ತರಬೇತಿ ಕಾರ್ಯಾಗಾರ*

ಮಾರ್ಚ್ 18, 2026

*ಯಡೂರಿನಲ್ಲಿ ವೈಸಿಸಿ ಕ್ರಿಕೆಟ್ ಕಪ್ ಪಂದ್ಯಾವಳಿ : ಗರಗಂದೂರಿನ ದಳಪತಿ ಕ್ರಿಕೆಟರ್ಸ್ ತಂಡ ಚಾಂಪಿಯನ್*

ಮಾರ್ಚ್ 18, 2026

*ಕೂಡಿಗೆ ಪರೀಕ್ಷಾ ಕೇಂದ್ರದಲ್ಲಿ ಸುಗಮವಾಗಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ* 

ಮಾರ್ಚ್ 18, 2026

*ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ*

ಮಾರ್ಚ್ 18, 2026

*ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನವೀಕರಣ ಕಟ್ಟಡ ಉದ್ಘಾಟನೆ : ಗ್ರಾಹಕರ ಹಿತರಕ್ಷಿಸುವಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಲವು ಕ್ರಮ : ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ*

ಮಾರ್ಚ್ 18, 2026

*ಮಾ.21 ರಂದು ಸಿಎನ್‌ಸಿಯಿಂದ “ವಿಚಾರ ಸಂಕಿರಣ” : ಡಾ.ಎಲ್.ಹನುಮಂತಯ್ಯ, ಕೆ.ಪಿ.ಬಾಲಸುಬ್ರಹ್ಮಣ್ಯ, ಎಂ.ಟಿ.ನಾಣಯ್ಯ, ರೇವತಿ ಪೂವಯ್ಯರಿಂದ ವಿಚಾರ ಮಂಡನೆ*

ಮಾರ್ಚ್ 18, 2026

*ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.