
ಮಡಿಕೇರಿ ಸೆ.17 NEWS DESK : ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 14, 15 ಹಾಗೂ 16 ರಂದು ಕೊಡವ ಪ್ರೀಮಿಯರ್ ಲೀಗ್ -2025 ಸೀಸನ್-4 ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಆಟಗಾರರ ನೋಂದಣಿಗೆ ಸೆ.25 ಕೊನೆಯ ದಿನವಾಗಿದೆ. ಪಂದ್ಯಾವಳಿಯು ಐಪಿಎಲ್ ಮಾದರಿಯಲ್ಲಿ ಇರಲಿದ್ದು, 12 ಫ್ರೆಂಚೈಸಿಗಳನ್ನು ಹೊಂದಿದೆ ಎಂದು ಪಂದ್ಯಾವಳಿಯ ಆಯೋಜಕರು ತಿಳಿಸಿದ್ದಾರೆ.









