
ವಿರಾಜಪೇಟೆ ಸೆ.17 NEWS DESK : ಶಿವಕೇರಿಯ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸೆ.22 ರಿಂದ ಅ.1 ರವರೆಗೆ ವಿಶೇಷ ಪೂಜೆಗಳು ನಡೆಯಲಿದೆ. 9 ದಿವಸ ನವದುರ್ಗಿ ಮಾತೆಯ 9 ಅವತಾರದ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮ ನಿತ್ಯ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.








