
ನಾಪೋಕ್ಲು ಸೆ.18 NEWS DESK : ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, 2024-25ನೇ ಸಾಲಿನ ಸಹಕಾರಿಯ 7ನೇ ವಾರ್ಷಿಕ ಮಹಾಸಭೆಯು ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್.ಅಯ್ಯಪ್ಪ, ಪ್ರಸ್ತುತ ಸಂಘದಲ್ಲಿ ಒಟ್ಟು 793 ಸದಸ್ಯರಿದ್ದು, ಈ ವರ್ಷ ನಮ್ಮ ಸಂಘವು 4,12,605/-ರಷ್ಟು ಲಾಭಗಳಿಸಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ ಎಂದರು. ಸಂಘವು 2024-2025ನೇ ಸಾಲಿನನಲ್ಲಿ 10 ಸೆಂಟ್ ನಿವೇಶನ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದರು ಹಾಗೂ ಸಂಘದ ದ್ಯೆಯೋದ್ದೇಶಗಳ ಬಗ್ಗೆ ಬಗ್ಗೆ ಮಾತನಾಡಿ ಸಂಘದ ಏಳಿಗೆಗಾಗಿ ಸದಸ್ಯರು ಸಹಕರಿಸುವಂತೆ ಕೇಳಿಕೊಂಡರು. ಈ ಸಂದರ್ಭ ಸಂಘದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಸದಸ್ಯರು ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾದ ಮುಂಡಂಡ.ಸಿ.ನಾಣಯ್ಯ ನಿರ್ದೇಶಕರಾದ, ಬಿದ್ದಾಟಂಡ ರಮೇಶ್ ಚಂಗಪ್ಪ, ಬೊಳ್ಯಯಂಡ.ಪಿ.ಹರೀಶ್ ಕಾರ್ಯಪ್ಪ, ಕನ್ನಂಬೀರ.ಸಿ.ತಿಮ್ಮಯ್ಯ, ಕುಂಡ್ಯೋಳಂಡ.ಸಿ.ಪೂವಯ್ಯ, ಕಾಟುಮಣಿಯಂಡ.ಎಮ್.ಉಮೇಶ್, ಅರೇಯಡ.ಎಂ.ಅಶೋಕ, ಚೋಕಿರ.ಎಸ್.ಚಿಣ್ಣಪ್ಪ, ಚೇನಂಡ.ಈ.ಗಿರೀಶ್ ಪೂಣಚ್ಚ, ಕುಲ್ಲೇಟ್ಟಿರ.ಎಂ.ದೇವಯ್ಯ, ಪಾಡೆಯಂಡ.ಸಿ.ಕುಶಾಲಪ್ಪ, ಮೂವೇರ.ರೇಖಾ ಪ್ರಕಾಶ್, ಕೋಟೇರ.ನೈಲಾ ಚಂಗಪ್ಪ, ಮುಖ್ಯಕಾರ್ಯನಿರ್ವಹಕರಾದ ಎಸ್.ಪಿ.ದೇವಯ್ಯ ಹಾಗೂ ಸಿಬ್ಬಂದಿಯಾದ ಕೆ.ಜಿ.ಸರಸ್ವತಿ ಹಾಗೂ ಕೊಡವ ಸಮಾಜದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಸಹನಾ ಎನ್.ವಿ ಉಪಸ್ಥಿತರಿದ್ದರು. ನಿರ್ದೇಶಕರಾದ ಚೋಕಿರ.ಎಸ್.ಚಿಣ್ಣಪ್ಪ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಮಾಳೆಯಂಡ.ಎ.ಅಯ್ಯಪ್ಪ ಸ್ವಾಗತಿಸಿದರು. ನಿರ್ದೇಶಕರಾದ ಕರವಂಡ.ಪಿ.ಲವ ನಾಣಯ್ಯ ವಂದಿಸಿದರು
ವರದಿ : ದುಗ್ಗಳ ಸದಾನಂದ.









