
ಸುಂಟಿಕೊಪ್ಪ ಸೆ.19 NEWS DESK : ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 42,36,318 ರೂ ಗಳ ಲಾಭಗಳಿಸಿದ್ದು ‘ಎ’ ತರಗತಿಯನ್ನು ಹೊಂದಿದೆ. ಸದಸ್ಯರಿಗೆ ಶೇ.18 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ.ಉತ್ತಪ್ಪ ಹೇಳಿದರು. ಸಂಘದ ಸಭಾಂಗಣದಲ್ಲಿ ನಡೆದ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದಲ್ಲಿ 1,670 ಮಂದಿ ಸದಸ್ಯರುಗಳಿದ್ದು, ಒಟ್ಟು ಪಾಲು ಬಂಡವಾಳ ರೂ.1,29,40,235 ಆಗಿರುತ್ತದೆ. 31-03-2025 ಸಂಘವು 10,80,76,290 ರೂಗಳ ಠೇವಣಿ ಸಂಗ್ರಹಿಸಲಾಗಿದೆ. ಕಳೆದ ಬಾರಿಗಿಂತ 1,28,43,961 ಹೆಚ್ಚಿಗೆ ಠೇವಣಿ ಸಂಗ್ರವಾಗಿದೆ. ಕೆಸಿಸಿ ಸಾಲ 380 ಸದಸ್ಯರಿಗೆ 9,8341,500 ರೂ. ನೀಡಲಾಗಿದೆ. ಈ ಪೈಕಿ ರೂ.9,55,18,500 ಡಿಸಿಸಿ ಬ್ಯಾಂಕ್‍ನಿಂದ ಹಾಗೂ ಸ್ವಂತ ಬಂಡವಾಳದಿಂದ 28,23000 ರೂ. ಸಾಲ ನೀಡಲಾಗಿದೆ. ಜಾಮೀನು ಸಾಲ 31.03.2025 ರವರೆಗೆ 91,95,000 ರೂ.ವಿತರಿಸಲಾಗಿದೆ. ಈ ಪೈಕಿ ರೂ81,399 ವಾಯಿದೆ ಮೀರಿದ ಸಾಲವಿದೆ ವಾಹನ ಸಾಲ ಆಭರಣ ಸಾಲ, ಗೊಬ್ಬರ ಸಾಲ, ಕೃಷಿಯೇತರ ಸಾಲ, ಮಧ್ಯಮಮಾವಧಿ ಸಾಲ, ವೇತನ ಆಧಾರಿತ ಸಾಲ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಸಂಘದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಅಧ್ಯಕ್ಷ ಎನ್.ಎಂ.ಉತ್ತಪ್ಪ ಹೇಳಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪಿಯುಸಿ ವರೆಗಿನ ಮಕ್ಕಳಿಗೆ ಸಂಘದಿಂದ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಸಭೆಯಲ್ಲಿ ಕೊಪ್ಪತ್ತಂಡ ಗಣೇಶ, ಎಂ.ಬಿ.ರಮೇಶ, ಜಾಲಿ ಸೋಮಯ್ಯ, ಪಿ.ಎಸ್.ರತೀಶ, ಎನ್.ಎಂ.ದೇವಯ್ಯ, ಮಂದೆಯಂಡ ಗಣೇಶ ಹಾಗೂ ಕುಟ್ಟಂಡ ಪ್ರಕಾಶ್, ಸಂಘದ ಉಪಾಧ್ಯಕ್ಷೆ ಸಿ.ಎನ್.ಪವಿತ್ರ, ನಿರ್ದೇಶಕರುಗಳಾದ ಬಿ.ಎ.ಮೊಣ್ಣಪ್ಪ, ಸಿ.ಎ.ತಮ್ಮಯ್ಯ, ಪಿ.ಪಿ.ತಿಲಕ್‍ಕುಮಾರ, ಎಂ.ಬಿ.ತಮ್ಮಯ್ಯ, ಕೆ.ಕೆ.ಕುಟ್ಟಪ್ಪ, ಎಂ.ಕೆ.ದೇಚಮ್ಮ, ಕೆ.ಎ.ಲತೀಫ್, ಎನ್.ಕೆ.ಭವಿನ್, ಎಂ.ಆರ್.ಗಿರೀಶ, ಹೆಚ್.ಇ.ಭೀಮಯ್ಯ, ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಟಿ.ಆರ್.ಪವನ್, ಸಿಬ್ಬಂದಿಗಳಾದ ಬಿ.ಎಸ್.ಹರೀಶ, ಎಂ.ಟಿ.ಡಾಟಿ, ಜೆ.ಶಿಲ್ಪ, ಆರ್.ಮಂಜು, ಎಂ.ಪಿ.ಬೋಪಣ್ಣ, ಹೆಚ್.ಎನ್.ವಸಂತ, ಬಿ.ಕೆ.ಮಹೇಂದ್ರ ಹಾಗೂ ಶಶಿಕುಮಾರ್ ಉಪಸ್ಥಿತರಿದ್ದರು.








